Connect with us

    LATEST NEWS

    ದಿನಕ್ಕೊಂದು ಕಥೆ- ಸರಿನಾ?

    ಸರಿನಾ?

    “ಸಾರ್ ಯಾವುದ್ಯಾವುದೋ ಕಾರಣಕ್ಕೆ ನನ್ನಿಂದ ದೂರ ಆಗ್ತಾ ಇದ್ರು ಹಲವರು. ಅದರಲ್ಲಿ ಕೆಲವರು ಕೊನೆಗೆ ಅರ್ಥಮಾಡಿಕೊಂಡು ಬಳಿ ಬಂದರೆ, ಕೆಲವರ ಬಳಿ ನಾನೇ ಹೋಗಿ ಏನಾಯಿತು ತಪ್ಪು ಏನಾಗಿದೆ ಅಂದರೂ ಉದಾಸೀನದಿಂದ ತಿರಸ್ಕರಿಸಿ ದೂರನೇ ಚಲಿಸುತ್ತಿದ್ದರು. ನನಗೆ ಯಾರನ್ನೂ ಕಳೆದುಕೊಳ್ಳುವುದು ಇಷ್ಟ ಆಗ್ತಿರಲಿಲ್ಲ. ಏನು ಮಾಡಬೇಕು ಗೊತ್ತಿಲ್ಲ.

    ತುಂಬಾ ಬೇಜಾರಾದಾಗ ಅವಳಿಗೆ ಕರೆ ಮಾಡುತ್ತಿದ್ದೆ .ಇದೇ ಕಾಡುತ್ತಿದ್ದ ಪ್ರಶ್ನೆಯನ್ನ ಅವಳಲ್ಲಿ ಕೇಳಿದಾಗ ‘ನೋಡು ನಾವು ಕಳೆದುಕೊಂಡಿರುವುದು ನಮಗೆ ಅಗತ್ಯವಾಗಿದ್ರೆ ಹುಡುಕುತ್ತೇವೆ. ಇಲ್ಲ ನಮಗೆ ಅದರಿಂದ ಯಾವ ಪ್ರಯೋಜನವೂ ಇಲ್ಲ ಅಂದಾಗ ಅದನ್ನೇಕೆ ಹುಡುಕಬೇಕು. ಮರೆತು ಮುಂದುವರಿಯುತ್ತೇವೆ. ನಿನಗೂ ಆಗಿರೋದು ಹಾಗೆ. ನಿನ್ನಿಂದ ದೂರ ಹೋದವರಿಗೆ ನಿನ್ನ ಅಗತ್ಯ ಇಲ್ಲ ಆದಕ್ಕೆ ಅವರು ನಿನ್ನ ಬಳಿ ಬರ್ತಾ ಇಲ್ಲ. ನಿನ್ನ ಹುಡುಕುತ್ತಾ ಇಲ್ಲ.

    ಇದನ್ನ ಯಾಕೆ ವಿಪರೀತ ಯೋಚಿಸ್ತೀಯಾ? ನಿನಗೆ ಮುಖ್ಯವಾಗಿರುವುದು ಇನ್ನು ತುಂಬಾ ಇದೆ ಅದನ್ನು ಹುಡುಕು ಸಿಗುತ್ತೆ ‘…ಹೌದಲ್ವಾ ಅಂದಿನಿಂದ ಬೇಡ ಅಂದು ದೂರ ಹೋದರನ್ನ ಹತ್ತಿರ ಸೇರಿಸೋಕೆ ಪ್ರಯತ್ನಿಸುತ್ತೇನೆ ಒಪ್ಪದಿದ್ದರೆ ನಾನೇ ಹೊಸ ದಾರಿ ಹುಡುಕುತ್ತೇನೆ .ಇದು ಸರಿನಾ ಸರ್….”

    ಎಂದು ವಿದ್ಯಾರ್ಥಿಯೊಬ್ಬ ಪತ್ರ ಬರೆದಿದ್ದ. ಇದಕ್ಕೆ ಉತ್ತರವೇನು ನೀಡಬೇಕು ಗೊತ್ತಾಗಲಿಲ್ಲ. ಮೊದಲ ನೋಟಕ್ಕೆ ಅವನ ಮಾತುಗಳು ಸರಿ ಅನ್ನಿಸಿತು.

    ನಿಮ್ಮ ಪ್ರಕಾರ….?

    ಧೀರಜ್ ಬೆಳ್ಳಾರೆ

    Share Information
    Advertisement
    Click to comment

    You must be logged in to post a comment Login

    Leave a Reply