LATEST NEWS
ದಿನಕ್ಕೊಂದು ಕಥೆ- ಪೂಜೆ
ಪೂಜೆ
ನಮ್ಮ ಮನೆಗಳ ಪೂಜೆಗಳಿಗೆ ದೇವರು ಒಲಿಯೋದಿಲ್ಲ ಖಂಡಿತ. ಪೂಜೆ ಅನ್ನೋದು ಅದೊಂದು ಪ್ರೀತಿಯ ಭಕ್ತಿ. ನಿರಾಕಾರನಿಗೆ ಶರಣಾಗುವುದು. ಆದರೆ ನಾವದನ್ನು ಮಾಡುತ್ತಿಲ್ಲವಲ್ಲ. ನಮ್ಮ ಮನೆಯೊಳಗಿನ ಅದ್ದೂರಿ ಪೂಜೆಯಲ್ಲಿ ನಮ್ಮತನವನ್ನು ಪ್ರದರ್ಶನಕ್ಕೆ ಇಡುತ್ತೇವೆ. ಭಕ್ತಿಗಿಂತ ಜಾಸ್ತಿ ಹಾಡು ಹರಟೆಗಳ ಗೂಡಾಗಿರುತ್ತದೆ.
ಮೊಬೈಲು ಹೆಚ್ಚು ಮಾತನಾಡುತ್ತಿರುತ್ತದೆ.ಮನೆಯ ಪೂಜೆಯ ಚಿತ್ರ ಮರುದಿನ ಅವರ ಮೊಬೈಲ್ನ ಸ್ಟೇಟಸ್ ನಲ್ಲಿ ಇಣುಕುತ್ತದೆ. ದೂರದೂರಿನವರು ಅಲ್ಲಿಂದಲೇ ಕೈಮುಗಿದು ಭಕ್ತಿ ಸಲ್ಲಿಸುತ್ತಾರೆ. ನಿರಾಕಾರನಲ್ಲಿ ಮೌನದಿ ಬೇಡಲು ನಾವು ತಯಾರಿಲ್ಲ. ನಮ್ಮ ಪ್ರದರ್ಶನ ಆಗಲೇಬೇಕು. ಅದರ ಕಟ್ಟುಪಾಡುಗಳು ನಮಗೆ ಅವಶ್ಯಕತೆ ಇಲ್ಲ .ಕೊನೆಗೆಏ ಕೈ ಮುಗಿದು ಉಂಡು ಬರುವುದು ಮಾತ್ರ ಭಕ್ತಿಯಾಗಿದೆ.
ಮಾತುಕತೆಯ ನಡುವೆ ನಾವು ನಿರಾಕಾರನೊಂದಿಗೆ ಸಂವಹನವನ್ನು ನಿಲ್ಲಿಸಿದ್ದೇವೆ .ಬರಿಯ ಮಾತಿನಲ್ಲಿ ಸ್ವಾಹಾಗಳು ಭಗವಂತನನ್ನ ಮೆಚ್ಚಿಸುವುದಿಲ್ಲ .ತಟ್ಟಿ ಎಬ್ಬಿಸುವುದೂ ಇಲ್ಲ. ನೀನೊಬ್ಬ ನನಗಿಂತ ಮೇಲಿನವನು ಅನ್ನುವ ಪ್ರಾಮಾಣಿಕ ಭಕ್ತಿಯಿಂದ ಅವನೊಂದಿಗೆ ಮೌನದಿ ಮಾತನಾಡಿದರೆ ಆತ ಒಲಿಯುತ್ತಾನೆ .ಹರಸುತ್ತಾನೆ .ಇಲ್ಲವಾದರೆ ಅವನು ಯಾವತ್ತೂ ನಮ್ಮ ಮನೆ ಪೂಜೆಯಲ್ಲಿ ಬಂದು ಕುಳಿತುಕೊಳ್ಳುವುದಿಲ್ಲ .ನಮ್ಮ ಭಕ್ತಿಯನ್ನು ಸ್ವೀಕರಿಸುವುದಿಲ್ಲ. ದೂರದಿಂದಲೇ ಚಲಿಸುತ್ತಾನೆ. ಇದೊಂದು ಸದ್ಯದ ತುರ್ತು ನೆನಪು ನಮಗಾಗಬೇಕು ಅನಿಸ್ತದೆ . ಅಲ್ವಾ?
ಧೀರಜ್ ಬೆಳ್ಳಾರೆ