LATEST NEWS
ದಿನಕ್ಕೊಂದು ಕಥೆ- ನದಿ ಮಾತಾಡಿತು
ನದಿ ಮಾತಾಡಿತು
ಮಾನವನಿರ್ಮಿತ ಸೌಧಗಳನ್ನು ಎತ್ತರಿಸಲು ನನ್ನ ಒಡಲಿನಿಂದ ಮರಳನ್ನು ಹೊತ್ತೊಯ್ದೆ. ನಾ ಕೇಳಿದರೂ ಮತ್ತೆ ಮರಳಿಸುವುದಿಲ್ಲವಾದರೆ ನಾನು ನಿನ್ನ ಬಳಿಯೇ ಬರುತ್ತೇನೆ.
ಬದುಕಿನ ಪ್ರಶ್ನೆಯೋ ಮನುಜಾ, ನಿನ್ನೊಬ್ಬನದಲ್ಲ ಪ್ರಕೃತಿ. ನನಗನ್ನಿಸುತ್ತೆ ಈ ಗೃಹಬಂಧನ ಅನ್ನೋದು ಪ್ರಕೃತಿಗೆ ತುಂಬಾ ಪ್ರಿಯವಾಗಿದೆ .ವಿಶಯಕ್ಕೆ ಬರ್ತೇನೆ ,ನೀನು ದುಡ್ಡಿನ ರುಚಿಗೆ ನನ್ನ ಒಡಲಿನಿಂದ ಮರಳನ್ನು ಬಗೆದು ಬಗೆದು ಸಾಗಿಸಿದ್ದಿಯಾ…ಅದೇ ಮರಳಿನಿಂದ ದೊಡ್ಡ ಕಟ್ಟಡ, ಗಟ್ಟಿ ಸೇತುವೆ ನಿರ್ಮಿಸಿದ್ದೀಯಾ,ದುಡ್ಡಿನ ಆಸೆಗೆ ಊರ ಜೋಡಿಸುವ ಸೇತುವೆಯ ಬುಡವನ್ನೇ ಕೊರೆಯಲಾರಂಭಿಸಿದೆ, ನಾನೇನು ಮಾಡಲಿ ಸೇತುವೆಯನ್ನ ನನ್ನೊಳಗೆ ಎಳೆದುಕೊಂಡೆ.
ಇನ್ನೂ ಕುಸಿಯೋದು ಸಾವಿರ ಇದೆ .ನಿನಗಿದು ಕ್ಷಣದ ಬದುಕು .ಭವಿಷ್ಯ ಕಣ್ಣಮುಂದೆ ಕಾಣೋದಿಲ್ಲ ಅಲ್ವಾ?.ಇನ್ನೂ ಕುಸಿಯುತ್ತದೆ,ಮುಳುಗುತ್ತದೆ. ನಿನ್ನ ಮನೆಯ ತಟ್ಟೆಯಲ್ಲಿರುವ ಅನ್ನ ನ್ಯಾಯದಿಂದ ಸಿಕ್ಕಿದೆಯಾ ಅನ್ನೋ ಪರಿಜ್ಞಾನ ಇದ್ದರೆ ಬದುಕು ಚೆನ್ನಾಗಿರುತ್ತೆ.
ನನ್ನ ದೂರಬೇಡ. ಎಲ್ಲವನ್ನು ಮತ್ತೆ ಮರಳಿಸಲಿ ಬೇಕು .ಮರಳು ಮರಣವ ತರಬಹುದು ನೆನಪಿಟ್ಟುಕೋ .ಇದು ಆರಂಭ ಮಾತ್ರ ಅಂತ್ಯ ಭೀಕರವಾಗಿರುತ್ತದೆ. ನಿನ್ನ ಶೇಖರಣೆ ನನ್ನ ಒಡಲೊಳಗೆ ಇಳಿಯೋದು ಖಂಡಿತಾ……
ಧೀರಜ್ ಬೆಳ್ಳಾರೆ