Connect with us

KARNATAKA

ಬೆಂಗಳೂರು – ಸಿಲಿಂಡರ್ ಸ್ಪೋಟಕ್ಕೆ ಹೊತ್ತಿ ಉರಿದ ಪ್ಲ್ಯಾಟ್..ಬೆಂಕಿಗೆ ಮಹಿಳೆ ಸಜೀವ ದಹನ…!!

ಬೆಂಗಳೂರು ಸೆಪ್ಟೆಂಬರ್ 21: ದೇವರಚಿಕ್ಕನಹಳ್ಳಿಯ ಆಶ್ರಿತ್ ಅಪಾರ್ಟ್ ಮೆಂಟ್ ನಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಸಾವನಪ್ಪಿರುವ ಘಟನೆ ನಡೆದಿದೆ. ಸಂಜೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಇಬ್ಬರು ಸಜೀವದಹನವಾಗಿದ್ದು ಹಲವರಿಗೆ ಸುಟ್ಟ ಗಾಯಗಳಾಗಿವೆ. ಬೆಂಕಿಯ ತೀವ್ರತೆ ಹೆಚ್ಚಾಗಿದ್ದು ಅಕ್ಕಪಕ್ಕದ ಮನೆಗಳಿಗೂ ಹಬ್ಬುತ್ತಿದೆ. ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.


ದೇವರಚಿಕ್ಕನಹಳ್ಳಿಯಲ್ಲಿರುವ 4 ಅಂತಸ್ತಿನ ಆಶ್ರಿತ್​​ ಅಪಾರ್ಟ್​ಮೆಂಟ್​ನಲ್ಲಿ ಅವಘಡ ಸಂಭವಿಸಿದೆ. 4 ಅಂತಸ್ತಿನಲ್ಲಿ ಒಟ್ಟು 72 ಫ್ಲ್ಯಾಟ್‌ ನಿರ್ಮಿಸಲಾಗಿತ್ತು. ಆಶ್ರಿತ್ ಶೆಲ್ಟರ್ಸ್ ಪ್ರೈವೆಟ್‌ ಲಿ. ಒಡೆತನದ ಅಪಾರ್ಟ್​ಮೆಂಟ್ ಇದಾಗಿದೆ ಎಂದು ಮಾಹಿತಿ ತಿಳಿದುಬಂದಿದೆ. ಇದೀಗ ಅಪಾರ್ಟ್​ಮೆಂಟ್​ಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಅನಾಹುತ ಸಂಭವಿಸದಂತೆ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ.

ನೋಡನೋಡುತ್ತಲೇ ಮಹಿಳೆಯೊಬ್ಬರು ಸಜೀವ ದಹನವಾಗಿದ್ದಾರೆ. ಗಾಯಗೊಂಡ ಐವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಾರ್ಟ್ಮೆಂಟ್‍ ಒಳಗೆ ಒಬ್ಬರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮೈಕ್ ನಲ್ಲಿ ಆನೌನ್ಸ್ ಮೆಂಟ್ ಮಾಡಿ ಮನೆಯೊಳಗೆ ಯಾರಾದ್ರೂ ಇದ್ದಾರ ಅಂತಾ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.