LATEST NEWS
ದಿನಕ್ಕೊಂದು ಕಥೆ- ಮನೆಯೊಂದರ ಕತೆ
ಮನೆಯೊಂದರ ಕತೆ
ಊರು ಕೆಲಸಕಾರ್ಯಗಳಿಗೆ ತೆರೆದಿದ್ದಾಗ ಅಡುಗೆ ಮನೆಯಲ್ಲಿ ಒಲೆ ಉರಿಯುತ್ತಿತ್ತು .ಹೊರಗೆ ಕಾರ್ಯ ಸ್ತಬ್ಧಗೊಂಡ ಬೆಂಕಿ ನಂದಲಾರಂಬಿಸಿತು. ರೋಗವೊಂದನ್ನು ಕಟ್ಟಿ ಹಾಕಲು ಒಳಗೇ ಇರಬೇಕೆಂಬ ಘೋಷಣೆಯಾಯಿತು. ಹಸಿವೆ ಹೊರಗೆ ಬಂದು ಅಳುವಾಗ ತೆರಳುವುದೆಲ್ಲಿಗೆ.
ಮೂರು ಹೊತ್ತಿನ ಊಟ ಒಂದು ಹೊತ್ತಿಗೆ ಇಳಿಯಿತು. ಸಾಂಬಾರು ಬೇಯುತ್ತಿದ್ದ ಪಾತ್ರೆ ಗೋಡೆಯ ಮೂಲೆಯಲ್ಲಿ ಸ್ತಬ್ಧವಾಗಿದೆ. ಒಂದು ಮಗುವಿನ ಅಳು ರಸ್ತೆಗೆ ಕೇಳುತ್ತಿದೆ.
“ಅಪ್ಪ ದಿನವೂ ಇದೇ ಚಟ್ನಿಯಾ ಬದಲಾಗೋದಿಲ್ವಾ?…”
ಉತ್ತರವಿಲ್ಲದ ಮನಸ್ಸೊಂದು ಅನ್ನವನ್ನು ಅದೇ ಚಟ್ನಿಯಲ್ಲಿ ಕಲಸಿ ಮಗುವಿನ ಬಾಯಿಗೆ ಇಡುತ್ತಿದೆ.
ಪಕ್ಕದ ಮನೆಯ ಮೊಬೈಲ್ ಒಳಗೆ “ಅಪ್ಪಾ ದಿನವೂ ಇದೇ ಚಟ್ನಿಯಾ” ನಗುವಿನೊಂದಿಗೆ ಮೋಜು ಕೊಡುತ್ತಲಿದೆ….
ಈ ಮನೆಯಲ್ಲಿ ಹಸಿವಿನ ಪ್ರಶ್ನೆಗೆ ಉತ್ತರವಿಲ್ಲದೆ ಖಾಲಿ ಹೊಟ್ಟೆ ಸಂದರ್ಭ ಸಹಿತ ವಿವರಿಸಲು ಪರದಾಡುತ್ತಿದೆ …
ಧೀರಜ್ ಬೆಳ್ಳಾರೆ