Connect with us

    LATEST NEWS

    ವೈರಲ್ ವಿಡಿಯೋ ಬಗ್ಗೆ ಡಿ ವಿ ಸದಾನಂದ ಗೌಡ ಸ್ಪಷ್ಟನೆ….ವಿಡಿಯೋ ಪಾರ್ವರ್ಡ್ ಮಾಡಿದ್ರೆ ಕಾನೂನು ಕ್ರಮ

    ಬೆಂಗಳೂರು ಸೆಪ್ಟೆಂಬರ್ 19: ನನ್ನ ನಕಲಿ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಕುರಿತಂತೆ ಸೈಬರ್ ಅಪರಾಧ ವಿಭಾಗಕ್ಕೆ ಈಗಾಗಲೇ ದೂರು ಸಲ್ಲಿಸಿಲಾಗಿದ್ದು, ಅಂತಹ ವಿಡಿಯೋ ವನ್ನು ಸಾಮಾಜಿಕ ಜಾಲತಾಣದಲ್ಲಿ ಪಾರ್ವಡ್ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಕೇಂದ್ರದ ಮಾಜಿ ಸಚಿವ ಸದಾನಂದ ಗೌಡ ತಿಳಿಸಿದ್ದಾರೆ.

    ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿರುವ ಸದಾನಂದ ಗೌಡ, ತಿರುಚಿದ , ನಕಲಿ ವಿಡಿಯೋ ಒಂದು ಹರಿದಾಡುತ್ತಿರುವುದು ತಿಳಿದು ಬಂದಿದೆ. ಆ ವಿಡಿಯೋದಲ್ಲಿರುವ ವ್ಯಕ್ತಿ ನಾನಲ್ಲ. ನನ್ನ ತೇಜೋವಧೆ ಮಾಡಲು ಇಂಥ ವಿಡಿಯೋ ಸೃಷ್ಟಿಸಿದ್ದಾರೆ ಎಂದು ಹೇಳಿದ್ದಾರೆ.
    ಸೈಬರ್ ಅಪರಾಧ ದಳಕ್ಕೆ ದೂರು ನೀಡಿದ್ದೇನೆ. ಈ ಕೆಲಸ ಮಾಡಿದ ಕಿರಾತಕರ ಬಂಧಿಸಲಾಗುತ್ತದೆ ಎನ್ನುವ ನಂಬಿಕೆ ಇದೆ ಎಂಧು ತಿಳಿಸಿದ್ದಾರೆ.


    ನ್ಯಾಯಾಲಯದ ಆದೇಶದಂತೆ ಈ ವಿಡಿಯೋ ಅಪ್ ಲೋಡ್ ಮಾಡುವುದು ಮತ್ತು ಫಾರ್ವ್ ವರ್ಡ್ ಮಾಡುವುದು ಸಹ ಶಿಕ್ಷಾರ್ಯ ಅಪರಾಧವಾಗುತ್ತದೆ. ಇಂಥ ಕೃತ್ಯದಲ್ಲಿ ಯಾರಾದಾರೂ ತೊಡಗಿದ್ದು ಕಂಡರೆ ನನಗೆ ಮಾಹಿತಿ ನೀಡಿ ಎಂದು ಕೇಳಿಕೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply