LATEST NEWS
ದಿನಕ್ಕೊಂದು ಕಥೆ- ಕಡಲಿನ ಉತ್ತರ
ಕಡಲಿನ ಉತ್ತರ
“ನೀನು ನನಗ್ಯಾವ ಹೆಸರು ಇಡುವುದು ಬೇಡ. ನೀನು ಹೆಸರಿಟ್ಟ ಮಾತ್ರದಲ್ಲಿ ನಾನು ಬದಲಾಗುವುದಿಲ್ಲ. ಅದನ್ನು ಅಪ್ಪಿಕೊಳ್ಳುವುದು ಇಲ್ಲ. ನೀನು ಒಂದಷ್ಟು ಪ್ರಶ್ನೆಗಳನ್ನು ಕೇಳಿದೆ ಅಲ್ವಾ ? ಅದಕ್ಕೆ ನನ್ನ ಬಳಿ ಕೆಲವಾರು ಉತ್ತರಗಳಿವೆ ಕೇಳು .ನನ್ನಲ್ಲಿ ನೀರು ಇರುವುದು ಯಾಕೆಂದರೆ ಭೂಮಿ ಉಳಿಸೋಕೆ.
ಇದರಿಂದಲೇ ಭೂಮಿ ಇನ್ನೂ ಬದುಕಿರೋದು. ನೀನು ಅನ್ನ ತಿನ್ನುತ್ತಿರುವುದು .ನೀರಿಲ್ಲದ ಊರು ಸೃಷ್ಟಿಯಾಗಿರುವುದು ನಿನ್ನಿಂದ ನಿನ್ನ ಅಹಂಕಾರದಿಂದ. ನನ್ನ ನೀರು ಮಳೆಯಾಗಿ ಸುರಿಯುವಾಗ ಅದನ್ನ ಹರಿಯೋಕೆ ಬಿಡೋದು ಯಾಕೆ? ಅದನ್ನು ಭೂಮಿಯೊಳಗೆ ಇಂಗಿಸು. ಆಗ ನೀರಿಲ್ಲದ ಊರಿನ ಜನರ ಬಿಕ್ಕಳಿಕೆ ನಿಲ್ಲುತ್ತದೆ.
ನದಿ ತೊರೆಗಳ ನಾನು ಕರೆಯುತ್ತಿಲ್ಲ .ನನ್ನ ಬಳಿಗೆ ಬರದೆ ಅದೆಲ್ಲಿಗೆ ಹೋಗಿ ಚಲಿಸಬೇಕು .ಅದು ಹರಿಯುತ್ತಿರುವುದು ಊರು ಹಸಿರಾಗಿದೆ ಮನೆ ಬೆಳಗುತ್ತಿದೆ .ಚಂದಿರ ನನ್ನ ಸಂಭ್ರಮ ಅವನನ್ನು ಪ್ರೀತಿಸುತ್ತೇನೆ . ಅದನ್ನು ಕೇಳುವ ಹಕ್ಕು ನಿನಗಿಲ್ಲ . ಕುಡಿಯುವ ನೀರಿನ್ನು ನೀನು ಉಳಿಸಬೇಕು ನನ್ನ ಬಳಿಬಂದು ಬಿಡೋದಲ್ಲ.
ನನ್ನೊಳಗೆ ಕ್ರೂರ ಜಂತುಗಳಿವೆ. ನಾನು ಅಬ್ಬರವನ್ನು ತೋರಿಸ್ತೇನೆ. ಯಾಕಂದ್ರೆ ನನ್ನನ್ನು ನಂಬಿ ಹಲವಾರು ಜೀವಿಗಳು ಬದುಕುತ್ತಿವೆ . ನಿನನ್ನು ಹಿಡಿತದಲ್ಲಿಟ್ಟುಕೊಳ್ಳಬೇಕಲ್ಲಾ.ಅಲ್ಲಿ ನದಿಗಳ ದಡವನ್ನು ಸಣ್ಣದು ಮಾಡಿ ಹರಿಯೋಕೆ ಬಿಟ್ಟವ ನೀನು.ನೀರು ಇಂಗದೇ ನನ್ನ ಬಳಿಗೆ ಬಂದರೆ ನಾನು ಜಾಗ ಕೊಡುವುದು ಬೇಡವಾ. ನಾನು ಮನುಷ್ಯನ ಹಾಗೆ ಅಂದರೆ ನಿನ್ನ ಹಾಗೆ ಬಣ್ಣ ಬದಲಾಯಿಸುವುದಿಲ್ಲ.ಭಯಪಡಿಸುತ್ತೇನೆ ನೆಮ್ಮದಿಯನ್ನೂ ನೀಡುತ್ತೇನೆ. ನೀನ್ಯಾವ ಹೆಸರು ನೀಡೋದು ಬೇಡ. ಆಗುವುದಾದರೆ ಮೇಲೆ ಹೇಳಿದ್ದನ್ನ ಪಾಲಿಸು ಅಷ್ಟೇ ಸಾಕು…….”
ಧೀರಜ್ ಬೆಳ್ಳಾರೆ