Connect with us

    LATEST NEWS

    ದಿನಕ್ಕೊಂದು ಕಥೆ- ಜಾತಿ

    ಜಾತಿ

    ಅಲ್ಲಿ ಅರಳಿಮರದ ಕಟ್ಟೆಯ ಎಡಭಾಗದಲ್ಲಿ ಜನ ಗುಂಪಾಗಿದ್ದರೆ . ಮದ್ಯದಲ್ಲಿ ಒಬ್ಬನನ್ನು ಹಾಕಿ ತುಳಿಯುತ್ತಿದ್ದಾರೆ . ಕೈಗೆ ಸಿಕ್ಕ ವಸ್ತುವಿನಲ್ಲಿ ಬಡಿಯುತ್ತಿದ್ದಾರೆ. ಅವನಿಗೆ ಹೊಡೆತಗಳು ಹೆಚ್ಚಾದಂತೆ ಅಲ್ಲಿರುವವರ ಆವೇಶಗಳು ಹೆಚ್ಚಾಗುತ್ತಿದ್ದಾವೆ.ಶತ್ರು ರಾಷ್ಟ್ರವನ್ನ ಹಿಮ್ಮೆಟ್ಟಿಸುವ ದೇಶಭಕ್ತಿಯನ್ನು ಪ್ರತಿನಿಧಿಸುವಂತಹ ಕಂಠದ ಮಾತುಗಳಂತೆ ಅಲ್ಲಿ ಆಕ್ರೋಶದ ಮಾತುಗಳು ಮೊಳಕೆಯೊಡೆದು ಹೆಮ್ಮರವಾಗುವ ಕಾಣುತ್ತಿದೆ.

    ದೂರ ನಿಂತ ಹೆಂಗಸರು ತಾವು ಮಾತಿನ ಚಾಟಿ ಬೀಸುತ್ತಿದ್ದಾರೆ. ಯಾರೋ ಪುಣ್ಯಾತ್ಮ ಪೊಲೀಸರಿಗೆ ಫೋನಾಯಿಸಿದ ಪೋಲಿಸ್
    ಸೈರನ್ ಹತ್ತಿರವಾಯಿತು. ಜನ ಅವನನ್ನು ಪೊಲೀಸರಿಗೆ ಒಪ್ಪಿಸಲು ತಯಾರಾದರು. ನನ್ನ ಪ್ರಕಾರ ಆತ ಯಾವುದೋ ಮಾಡಬಾರದ ತಪ್ಪನ್ನೇ ಮಾಡಿದ್ದಾನೆ ಅನ್ನಿಸುತ್ತೆ. ಏನು ಅನ್ನೋದು ಆ ಗಲಾಟೆಯಲ್ಲಿ ನನಗೆ ಅರಿವಾಗಲಿಲ್ಲ. ಪೊಲೀಸ್ ಅವನ ಕೊರಳಪಟ್ಟಿಗೆ ಕೈ ಹಾಕಿದಾಗ ಜೀವವೊಂದು ಹೋಗಿರಲಿಲ್ಲವಷ್ಟೇ. ತುಟಿ ಒಡೆದಿತ್ತು, ಕಣ್ಣು ಊದಿ ಹೋಗಿತ್ತು.

    ತಲೆಯಿಂದ ರಕ್ತ ಇಳಿಯುತ್ತಿತ್ತು. ಸುತ್ತಲಿದ್ದವರ ಉಸಿರು ಏರುತಲಿತ್ತು. ಪೊಲೀಸ್ ಗಾಡಿ ಹೊರಟುಹೋಯಿತು. ಜನ ದೂರವಾದರೂ ಮಾತುಗಳು ಕೇಳುತ್ತಲೇ ಇದ್ದವು.ಅಲ್ಲಿರುವ ಅಂಗಡಿಯವನನ್ನು ಕೇಳಿದಾಗ “ಆ ಹುಡುಗ ಬೇರೆ ಜಾತಿಯ ಹುಡುಗಿಯನ್ನು ಇಷ್ಟಪಟ್ಟಿದ್ದಾನೆ, ಅವಳು ಒಪ್ಪಿಕೊಂಡಿದ್ದಾಳೆ. ಆದರೆ ಊರವರಿಗೆ ಇಷ್ಟವಿಲ್ಲ .ಅದಕ್ಕೆ ಅವನು ಬಲಿಯಾದ .”
    ಬದುಕು ಅವರಿಷ್ಟದ ಹಾಗೆ ಅಲ್ವಾ? ಅವನಿಗೆ ಒಪ್ಪಿಗೆಯಾಗುವ ಜೊತೆ ಬದುಕೋಕೆ ಅವಕಾಶವೇ ಇಲ್ವಾ?

    ಶಾಲೆಯಲ್ಲಿ ವಿದ್ಯೆ ಕಲಿಸುವ ಅಧ್ಯಾಪಕರು, ಆಸ್ಪತ್ರೆಯಲ್ಲಿ ಜೀವ ನೀಡುವ ವೈದ್ಯರು, ನರ್ಸು, ನ್ಯಾಯಾಲಯದ ವಕೀಲ, ಆಪತ್ತಿನಲ್ಲಿ ಸಹಾಯಮಾಡಿದ ಗೆಳೆಯ, ಯಾರೋ ಒಬ್ಬ ಅಪರಿಚಿತ , ನಮ್ಮ ಅಂಗಡಿಗೆ ಬರುವ ಗಿರಾಕಿ,ನಮಗೆ ಕೆಲಸ ನೀಡಿದ ಧಣಿ, ಸಾಲ ನೀಡುವ ಬ್ಯಾಂಕ್ ನ ಮೇನೇಜರ್, ಊರಿಂದ ಊರಿಗೆ ತಲುಪಿಸೋ ಡ್ರೈವರ್, ಗಡಿಯ ಸೈನಿಕ, ಊರ ಪೋಲೀಸ್,ಅನ್ನಬೆಳೆಯುವ ರೈತ, ಕೆಲಸಕ್ಕೆ ಬಂದ ಕೂಲಿಯವ ಇಲ್ಲೆಲ್ಲೂ ನಾವು ನಮ್ಮದೇ ಜಾತಿಯವರನ್ನು ಹುಡುಕಿಕೊಳ್ಳುವುದಿಲ್ಲ.

    ಇಲ್ಲಿ ನಮ್ಮ ಕೆಲಸವಾಗಬೇಕು, ನಮಗೆ ಒಳಿತಾಗಬೇಕು,ಲಾಭವಾಗಬೇಕು, ನಾವು ಬದುಕಬೇಕು ಅಷ್ಟೇ. ಬದುಕನ್ನು ಆರಿಸುವಾಗ ಮಾತ್ರ ನಮ್ಮದೇ ಜಾತಿವರಾಗಿರಬೇಕು .ಅವರವರಿಗೆ ಅವರವರದೇ ಆದ ಯೋಚನೆ ಭಾವನೆಗಳಿರುತ್ತವೆ. ಬದುಕಲು ಬಿಡಿ. ಏನಂತೀರಿ…?

    ಧೀರಜ್ ಬೆಳ್ಳಾರೆ

    Share Information
    Advertisement
    Click to comment

    Leave a Reply

    Your email address will not be published. Required fields are marked *