Connect with us

LATEST NEWS

ದಿನಕ್ಕೊಂದು ಕಥೆ- ಬದಲಾವಣೆ ಬೇಕಾಗಿದೆ

ಬದಲಾವಣೆ ಬೇಕಾಗಿದೆ

ನನ್ನ ಕೈಬೆರಳುಗಳು ಮೊಬೈಲ್ ಪರದೆಯ ಮೇಲೆ ಓಡಾಡುತ್ತಲಿವೆ.ಇನ್ನು ಅಲ್ಲಿ ಬರೋ ಮಾಹಿತಿಗಳನ್ನು ಓದುತ್ತಾ, ಸ್ಟೇಟಸ್ ಗಳನ್ನು ಓಡಿಸುತ್ತಲೇ ಇರುತ್ತೇನೆ. ಸುದ್ದಿಯೊಂದು ಹಾದುಹೋಯಿತು .ಛತ್ತೀಸ್ಗಡದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಪೊಲೀಸರನ್ನ ಹತ್ಯೆಗೈದರು, ಗಡಿಯಲ್ಲಿ ಉಗ್ರರ ಗುಂಡಿಗೆ ನಾಲ್ಕು ಜನ ಸೈನಿಕರು ಬಲಿಯಾದರು. ಇಂತಹ ನೂರಾರು ಸುದ್ದಿಗಳು ಓಡಾಡುತ್ತಲೇ ಇದ್ದಾವೆ. ನನ್ನ ಕಣ್ಣಲ್ಲಿ ಒಂದು ಹನಿ ಕಣ್ಣೀರು ಇಳಿದಿಲ್ಲ.

ಅದರ ಬಗ್ಗೆ ಗಾಢವಾಗಿ ಯೋಚಿಸಿಲ್ಲ. ಅಲ್ಲಿ ನನ್ನ ಮನೆಯವರು ಅಥವಾ ಸಂಬಂಧಿಕರು ಮರಣಿಸಿಲ್ಲ ಅನ್ನೋದಕ್ಕ? ಆದರೆ ಅಲ್ಲಿ ಜೀವ ಕಳೆದುಕೊಂಡವರು ನನಗೋಸ್ಕರ ಅಥವ ನಮಗೋಸ್ಕರ ಮರಣಿಸಿದ್ದಾರೆ ತಾನೇ?. ಯಾಕೆ ಈ ಅವಗಣನೆ. ಕೊನೆಗೊಂದು ದಿನ ನನ್ನವರ ಸಾವನ್ನು ನಾನು ಗಮನಿಸಿದೆ ಇರುತ್ತೇನೋ ಏನೋ. ತಪ್ಪು ನನ್ನೊಳಗಿದೆ. ಸುದ್ದಿಗಳು ಅಕ್ಷರಗಳಾಗಿ ಕಣ್ಣಮುಂದೆ ಹಾದು ಹೋಗುತ್ತಲೇ ಇದ್ದರು, ಮನಸ್ಸಿನೊಳಗೆ ಇಳಿದಿಲ್ಲ. ಹೊಸ ಸುದ್ದಿ ಹುಟ್ಟುತ್ತಿದೆ.

ಸುದ್ದಿ ಸದ್ದಾಗುವುದಿಲ್ಲ. ಸದ್ದಾದರೂ ಕ್ಷಣಗಳಲ್ಲಿ ಮರೆಯಾಗುತ್ತದೆ. ಒಂದೊಮ್ಮೆ ಹಾರಿಸಿದ ಡ್ರೋನ್ ಮರೆಯಾಗಿದೆ ,ಅತ್ಯಾಚಾರ ಮೌನವಾಗಿದೆ, ಜೈಲು ಸೇರಿದವ ಹೊರಗೆ ಬಂದು ಓಡಾಡುತ್ತಿದ್ದಾನೆ,ಡ್ರಗ್ಸ್ ನಶೆಯಲ್ಲಿದೆ. ನಾನು ಎಲ್ಲಾ ವಿಚಾರವನ್ನು ನಾಲ್ಕು ದಿನ ಮಾತಾಡಿ ಸುಮ್ಮನಾಗಿ ಬಿಟ್ಟಿದ್ದೇನೆ. ಇಲ್ಲಿ ಬೇರೆಯವರ ಬಗ್ಗೆ ಗೊತ್ತಿಲ್ಲ ನಾನು ಬದಲಾಗಲೇಬೇಕು. ಉಗ್ರವಾಗಿ ಅಲ್ಲದಿದ್ದರೂ ನನ್ನೊಳಗೆ ಬದಲಾವಣೆ ಅನಿವಾರ್ಯವಾಗಿದೆ.

ಕೊನೆಪಕ್ಷ ನಾಲ್ಕು ಹನಿ ಕಣ್ಣೀರು ಇಳಿಯಬೇಕು. ಸತ್ತವರ ಮನೆಯಲ್ಲಿ ಅವರ ಹೆಂಡತಿ ಮಕ್ಕಳು ತಂದೆ-ತಾಯಿ ಇದ್ದರಲ್ವಾ. ಅಲ್ಲಿ ಕಳೆದುಕೊಂಡ ನೋವಿನ ಸಣ್ಣ ಘಾಸಿಯಾದರೆ ನನ್ನೊಳಗೆ ಮೂಡಬೇಕಲ್ವಾ?. ನಾನು ಮನುಷ್ಯ ಆಗಬೇಕಾಗಿದೆ. ವಿಶ್ವಮಾನವ ಸಂದೇಶವನ್ನು ಬಾಯಲ್ಲಿ ಹೇಳೋದಕ್ಕಿಂತ ಆಚರಿಸಿಕೊಂಡರೆ ಒಳ್ಳೆಯದು..
ನಾನು ಮಾ’ನವ’ನಾಗುತ್ತೇನೆ.

ಧೀರಜ್ ಬೆಳ್ಳಾರೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *