LATEST NEWS
ದಿನಕ್ಕೊಂದು ಕಥೆ- ಸಂಬಂಧ
ಸಂಬಂಧ
“ದೀರೂ ಸಾರಿ ಕಣೋ ..ಗಂಟೆ ರಾತ್ರಿ 12 ಆಗಿದೆ. ಈಗ ಕಾಲ್ ಮಾಡುತ್ತಿದ್ದೇನೆ,ಆದರೂ ಬೇಜಾರು ಮಾಡ್ಕೋಬೇಡ ”
“ಹೇಳು..ವಿನು, ಏನ್ ವಿಷಯ”
“ಏನಿಲ್ವೋ, ಸುಮ್ಮನೆ ಮಾತಾಡಬೇಕು ಅನಿಸ್ತು. ಅದಕ್ಕೆ ”
“ಹೇಳು”
” ಈ ಸಂಬಂಧಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳುವುದು ಕಷ್ಟದ ಮಾತಲ್ವಾ?”
” ಯಾಕೆ ಹಾಗೆ ಹೇಳ್ತಿಯ ಹಾಗೇನಿಲ್ಲಪ್ಪ, ಆರಾಮಾಗಿ ಉಳಿಸಿಕೊಳ್ಳಬಹುದು”
” ಇಲ್ಲೋ ಕೊನೆಗದು ಹೆಸರಿಗೆ ಮಾತ್ರ ಉಳಿದಿರುತ್ತೆ ಅದರೊಳಗೆ ಸತ್ವಗಳೇ ಇರುವುದಿಲ್ಲ” “ಯಾಕೆ ಹಾಗೆ ಹೇಳ್ತಿಯ ”
” ಸಂಬಂಧ ಕೊನೆಯವರೆಗೂ ಹಾಗೆ ಉಳಿಯಬೇಕಾದರೆ ನೀನು ಅವರಿಗೆ ಇಷ್ಟವಾಗುವ ಹಾಗೆ ಇರಬೇಕು, ನಿನಗಿಷ್ಟ ಬಂದ ಹಾಗೆ ಬದುಕುತ್ತೇನೆ ಎಂದರೆ ಯಾವ ಸಂಬಂಧವೂ ಉಳಿಯುವುದಿಲ್ಲ ”
“ಇಲ್ಲಪ್ಪ ನಮ್ಮನ್ನು ಅರ್ಥ ಮಾಡಿಕೊಂಡು ನಮ್ಮೊಂದಿಗೆ ಕೊನೆಯವರೆಗೂ ಎಲ್ಲ ಸಂಬಂಧವೂ ಉಳಿಯುತ್ತೆ ”
“ಅದು ನೀನು ಅಂದುಕೊಂಡಿರುವುದು ನಿನ್ನೊಂದಿಗೆ ಇಂದಿನವರಿಗೆ ಉಳಿದುಕೊಂಡಿರು ಸಂಬಂಧಗಳಲ್ಲಿ ಅವರಿಗೆ ನಿನ್ನ ಬಗ್ಗೆ ಎಷ್ಟು ಮನಸ್ತಾಪಗಳು, ಬೇಸರಗಳು, ಹಾಗೆ ಉಳಿದುಕೊಂಡಿರುತ್ತದೆ ಅನ್ನೋ ಅರಿವಿದೆಯಾ? ,ಸಂಬಂಧ ಹಾಗೆ ಇರಬಹುದು ಆದರೆ ಅದು ಮುಖದಲ್ಲಿ ಮನಸ್ಸಿನಲ್ಲಿ ಇಲ್ಲ”.
“ಇಲ್ಲ ನಾನು ಇದನ್ನು ಒಪ್ಪೋದಿಲ್ಲ”
” ನಿನ್ನ ಅನುಭವಕ್ಕೆ ಬಂದಾಗ ನಿನಗೆ ಅರಿವಾಗುತ್ತೆ. ಒಂದಂತೂ ಸತ್ಯ. ಆದರೂ ಸಂಬಂಧ ಉಳೀಬೇಕಂದ್ರೆ ಅವರುಗಳ ಇಷ್ಟದ ಪ್ರಕಾರ ಇದ್ದರೆ ಮಾತ್ರ,ನಿನಗಿಷ್ಟ ಬಂದ ಹಾಗೆ ಇರುತ್ತೇನೆ ಅಂದ್ರೆ ಅದು ನಿನ್ನ ಒಬ್ಬಂಟಿ ಪಯಣ ಆಗುತ್ತೆ .ಕಾಡಿನ ರಸ್ತೆಯಲ್ಲಿ ನಡಿತಾ ಇರುವಾಗ ಒಂದೆರಡು ಗಾಡಿಗಳು ಆಗಾಗ ಕಾಣಸಿಗುವ ಹಾಗೆ,ಸಂಬಂಧಗಳು ಬೇಟಿಯಾಗಿ ಹೊರಟು ಹೋಗುತ್ತವೆ. ಆ ಗಾಡಿಗಳು ನಿನ್ನನ್ನು ಜೊತೆಯಾಗಿ ಕರೆದುಕೊಂಡು ಹೋಗೋದಿಲ್ಲ. ಯಾರದರೂ ಕರೆದುಕೊಂಡು ಹೋದರೂ ಅವರ ಊರಿನ ತಿರುವಿನಲ್ಲಿ ನಿನ್ನ ಇಳಿಸಿ ಮುಂದೆ ಸಾಗುತ್ತಾರೆ.ನನ್ನ ಪ್ರವಚನ ನೀನಗೆ ಏಕೆ ನೀನು ಮಲ್ಕೋ ನಾಳೆ ಸಿಗುವ”
” ನನಗೆ ಅವನ ಮಾತು ಸರಿ ಅನ್ನಿಸಿಲ್ಲ ,ನಿಮಗೆ?…”
ಧೀರಜ್ ಬೆಳ್ಳಾರೆ