Connect with us

LATEST NEWS

ದಿನಕ್ಕೊಂದು ಕಥೆ- ನಂಬಿದ ಬದುಕು

ನಂಬಿದ ಬದುಕು

ಧೂಳಿನ ಕಣಗಳು ಸೂರ್ಯನ ಬಿಸಿಲಿಗೆ ಬಿಸಿಯಾಗುತ್ತಿದೆ. ಅವನು ನಾಲ್ಕು ರಸ್ತೆ ಕೂಡುವಲ್ಲಿ ನಿಂತಿದ್ದಾನೆ. ಸಮವಸ್ತ್ರ ಮೈಗಂಟಿದೆ. ಬೆವರು ಬಿಸಿಲಿನ ಶಾಖಕ್ಕೆ ಹೊರಬಂದು ಆವಿಯಾಗುತ್ತಿದೆ. ಧೂಳಿನ ಕಣಗಳು ಮೈಯನ್ನು ಅಪ್ಪಿಕೊಂಡು ಮತ್ತಷ್ಟು ಬಿಸಿ ನೀಡುತ್ತಿದೆ.

ಇವನೂರು ದೂರದ ಬದಿಯಡ್ಕ. ಮನೆಯ ಅಡಿಪಾಯ ಇರುವ ಸಣ್ಣ ಜಾಗ ಸ್ವಂತದ್ದು. ಅಲ್ಲಿ ನೆಲದಿಂದ ಎದ್ದು ನಿಂತ ಸಣ್ಣಮನೆ. ತಮ್ಮ ಮತ್ತು ಅಮ್ಮನ ಜೊತೆ ವಾಸ. ಶಿಕ್ಷಣಕ್ಕಾಗಿ ವಿಪರೀತ ಖರ್ಚು ಮಾಡುವ ಸ್ಥಿತಿ ಮನೆಯದಲ್ಲ. ವಿದ್ಯಾರ್ಥಿವೇತನ ದಲ್ಲಿ ಬದುಕು ರೂಪಗೊಳ್ಳುತ್ತಿತ್ತು.

ಕಲಿತ ವಿದ್ಯೆ ವಿಜ್ಞಾನವಾದರೂ ಕೆಲಸ ಸಿಗಬೇಕಲ್ಲಾ. ಕೆಲಸ ಹಿಡಿಯದಿದ್ದರೆ ಮನೆ ನಡೆಯಬೇಕಲ್ಲ. ಪರೀಕ್ಷೆ ಬರೆದು ಆರಕ್ಷಕನಾದ. ಇಲ್ಲಿ ಬಿಸಿಲನ್ನು ಕಾಯುತ್ತಿದ್ದ. ದೊಡ್ಡ ಹುದ್ದೆಯ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. ಇವನು ಅಪರಾಧಿ. ಅಮ್ಮನ ಸ್ಥಿತಿ ನೋಡಿ ತನ್ನೆಲ್ಲ ಕನಸುಗಳನ್ನು ಕೊಂದವ.

ಅರಣ್ಯಾಧಿಕಾರಿ ಹುದ್ದೆಗೆ ಪರೀಕ್ಷೆ ಬರೆದು ಆಯ್ಕೆಯಾದ. ಗೌರವ ,ವೇತನ ,ಅಧಿಕಾರ, ದೊಡ್ಡದಾಯಿತು. ಅಮ್ಮನ ಮುಖದಲ್ಲಿ ನೆಮ್ಮದಿಯ ಕಳೆ ಕಂಡಿತು. ಮತ್ತೆ ಕನಸುಗಳನ್ನು ಹೆಣೆಯಲಾರಂಭಿಸಿದ. ಅಲ್ಲಿ ಹಸಿರಿನ ನಡುವೆ ಅರಣ್ಯವನ್ನ ಕಾಯುತ್ತಿದ್ದ. ಬದುಕಿನ ಗೇರ್ ಬದಲಾಯಿಸಿ ಎಕ್ಸಲೇಟರ್ ಅದುಮಿದ್ದಾನೆ.

ಚಾಲನೆ ನಿಧಾನವಾಗಿ ಸಾಗುತ್ತಿದೆ. ಹೊಸ ದಾರಿಗಳು ಕಾಣಲಾರಂಭಿಸಿದೆ. “ನಂಬಿದರೆ ಬದುಕು ನಿಮ್ಮದಾಗುತ್ತದೆ” ಇದು ಅವನದೇ ಮಾತು. ನಮಗೂ ಅನ್ವಯವಾಗಬಹುದು ಅನ್ನಿಸುತ್ತೆ….

ಧೀರಜ್ ಬೆಳ್ಳಾರೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *