Connect with us

LATEST NEWS

ದಿನಕ್ಕೊಂದು ಕಥೆ- ಕಳಚುವಿಕೆ

ಕಳಚುವಿಕೆ

ಜಗಲಿಯ ಮೇಲೆ ಕುಳಿತು ಕಾಲು ಕೆಳಗೆ ಹಾಕಿ ಕಾಲಿಗೊಂದು ತಾಳ ನೀಡಿ ಅದನ್ನು ಆಡಿಸುತ್ತಾ ಕೂತವನಿಗೆ ಯೋಚನೆಗಳು ಒಂದೊಂದಾಗಿ ಚಪ್ಪಲಿ ಕಳಚಿ ಮನದೊಳಗೆ ಪ್ರವೇಶಿಸುತ್ತಲೇ ಇದ್ದವು. ಇದರಲ್ಲಿ ಹಲವು ಅನಿರೀಕ್ಷಿತ ,ಅಪರಿಚಿತ ಭೇಟಿಗಳಾದರೂ, ಒಂದು ಯೋಚನೆ ಒಂದಷ್ಟು ಸಮಯವನ್ನು ಕೇಳಿ ಪಡೆದುಕೊಂಡು ಒಳಗೆ ಓಡಾಡುತ್ತಾ ಕೊಂಡಿಗಳನ್ನು ಜೋಡಿಸುತ್ತಾ ದೊಡ್ಡದಾಗಿ ಬೆಳೆಯಿತು.

ಅದಷ್ಟನ್ನು ಹರವಿ ಕೊಂಡಿದ್ದನ್ನು ಒಟ್ಟುಗೂಡಿಸಿ ಹೊಲಿದಿದ್ದೇನೆ. ಮಾಲೆಯಾಯಿತೋ, ದಿರಿಸಾಯಿತೋ ಗೊತ್ತಿಲ್ಲ. ಜೋಡಣೆಯಾಗಿದೆ ಅಷ್ಟೇ. “ಯೋಚನೆ : ಕಾಲ ಮತ್ತೆ ಬರಲಿಕ್ಕಿಲ್ಲ .ನನ್ನ ಅಮ್ಮ ಅಪ್ಪನ ಕಾಲದ್ದು ಅಥವಾ ನಿಮ್ಮ ಅಮ್ಮ ಅಪ್ಪ ಅಥವಾ ಅಜ್ಜನ ಕಾಲದ್ದೂ ಆಗಿರಬಹುದು.

ಅಲ್ಲಿ ಕೈಯಲ್ಲಿ ಓಡಾಡುವ ಮೊಬೈಲ್ ಅಭ್ಯಾಸವಿಲ್ಲದಿರುವ ಸಮಯ ,ನಾವು ದಿನಂಪ್ರತಿ ಬಯಸುವ ಫೇಸ್ಬುಕ್, ಇನ್ಸ್ಟಾಗ್ರಾಂ ಎಂಬ ಮಾಯಾಲೋಕ ,ವಾಟ್ಸಪ್ ಎಂಬ ಮಾಹಿತಿಯ ಕಣಜ ಪರಿಚಯವಿಲ್ಲದ ಜಗತ್ತದು. ಜನನದ ದಿನ ಗಳಿಗೆಗಳ ಲೆಕ್ಕವಿಲ್ಲ. ಮದುವೆಯ ಮುಹೂರ್ತದ ಅರಿವಿಲ್ಲ. ಖ್ಯಾತನಾಮರಗಳ ಜನುಮದಿನ, ಬೇರೆ ಊರುಗಳ ಕೌತುಕ ಲೋಕ, ರಾತ್ರಿ ಕುಣಿತಗಳ ಮೋಜಿನ ಹಬ್ಬ ,ಇವೆಲ್ಲವೂ ಕಾಣದ ಕಣ್ಣುಗಳು ಅವು .

ಮನೆಯ ಮಂದಿಯೇ ಬದುಕು. ಅಲ್ಲೇ ಜಗತ್ತು. ಆಶ್ಚರ್ಯವೊಂದನ್ನು ತನ್ನೊಳಗೆ ಬಣ್ಣಿಸಿಕೊಂಡ ಕಾಲ ಅದು. ಮಾಯವಾಗುತ್ತದೆ …..ಅಂಗೈಯೊಳಗೆ ಪ್ರಪಂಚ ಅರಿಯುವ ದಿನವೊಂದು ಬಂದಿದೆ. ಅರಿವಿನ ದೀವಿಗೆ ಹೊರಗಿನಿಂದ ಒಳಗಿಣುಕಬೇಕಿದೆ. ಬದಲಾಗುತ್ತದೆ…. ಮತ್ತೆಂದು ಕಾಣಲಾಗದ ಕೊಂಡಿಯೊಂದು ಕಳಚುತ್ತದೆ….. ಅನಿವಾರ್ಯ ಬದಲಾವಣೆ….. ಕಳೆದುಕೊಳ್ಳುವ ಭಯವಿದೆ ಅಷ್ಟೇ…..”
ಮಳಯ ಹನಿ ನೆಲಕ್ಕೆ ಬಡಿದು ಮಣ್ಣಿನ ಕಣಗಳು ಪಾದವನ್ನು ಮುದ್ದಿಸುತ್ತಿವೆ.

ಧೀರಜ್ ಬೆಳ್ಳಾರೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *