Connect with us

    LATEST NEWS

    ದಿನಕ್ಕೊಂದು ಕಥೆ- ಸ್ವಾತಂತ್ರ್ಯ

    ಸ್ವಾತಂತ್ರ್ಯ

    ದಾರಿ ಸಾಗುತ್ತಿತ್ತು ಹಾಸ್ಟೆಲ್ ತಲುಪುತ್ತಿರಲಿಲ್ಲ. ಕಾಲೇಜಿನಲ್ಲಿ ಯಾವುದೋ ಬೈಗುಳಕ್ಕೆ ಬೇಸರಗೊಂಡಿದ್ದ ಮನಸ್ಸು, ನಡಿಗೆಯನ್ನ ನಿಧಾನ ಮಾಡಿಸಿತ್ತು. ಮನಸ್ಸಿನ ನೋವು ಕಾಲಿಗೆ ಅರ್ಥವಾಗಿ ಅದು ನೆಲವನ್ನು ನಿಧಾನವಾಗಿ ಊರಿ ಮುಂದಿನ ಹೆಜ್ಜೆಯನಿಡುತ್ತಿತ್ತು. ಅಲ್ಲಿ ಆ ಮರದ ಬುಡದಲ್ಲಿ ಕುಳಿತವನ ಪರಿಚಯ ನನಗಿಲ್ಲ.

    ದುಃಖ ಹೆಚ್ಚಿದೆ ಅನ್ನೋದು ಅವನ ಮುಖವೇ ಹೇಳುತ್ತಿತ್ತು. ಯಾರಲ್ಲಿಯಾದರೂ ಹೇಳಿಕೊಳ್ಳಬೇಕೆಂಬ ಧಾವಂತ ಅವನ ಮುಖದಲ್ಲಿ ಕಾಣುತ್ತಿತ್ತು. ನನಗೆ ಹಾಸ್ಟೆಲಿಗೆ ತೆರಳಿ ಮಾಡುವಂತಹ ಘನಂದಾರಿ ಕೆಲಸವಿಲ್ಲದ ಕಾರಣ ಮಾತಿಗೆ ಕೂತೆ. “ನಮಸ್ತೆ ಸರ್, ಏನೋ ನೀವು ನೋವಿನಲ್ಲಿ ಇರೋ ಹಾಗಿದೆ” ಅಲ್ಲಿ ಪ್ರಶ್ನೆಗೆ ನೇರ ಉತ್ತರಕ್ಕೆ ಬದಲು ಮೊದಲೇ ಯಾತನೆಯ ವಿವರಣೆ ಅರಂಭವಾಯಿತು.

    ” ಸರ್ ನಾನು ತಪ್ಪು ಮಾಡಿದ್ದೇನೆ ,ಪ್ರೀತಿಸಿದವಳೇ ನನ್ನ ಜಗತ್ತು ಅಂದುಕೊಂಡಿದ್ದೆ. ಪ್ರೀತಿಯ ಅಮಲು ಜಾಸ್ತಿಯಾಗಿತ್ತು ನನಗೆ, ಅವಳ ಸ್ವಾತಂತ್ರ್ಯವನ್ನು ನಾನು ಕಸಿದುಕೊಂಡೆ. ನಾನು ಹೇಳಿದ್ದನ್ನು ಮಾತ್ರ ಮಾಡಬೇಕು, ನಾ ಬೇಡವೆಂದರೆ ಮಾಡಬಾರದು .ಅವಳ ವ್ಯಕ್ತಿತ್ವವನ್ನು ನನಗಿಷ್ಟದ ಹಾಗೆ ಬದಲಾಯಿಸಲು ಆರಂಭಿಸಿದೆ. ಪ್ರಶ್ನೆಗಳ ಪಟ್ಟಿಗಳನ್ನು ಸಿದ್ಧವಾಗುತಲಿದ್ದವು. ಪಕ್ಕದಲ್ಲಿ ಕುಳಿತು ಮೈ ಸವರ ಬೇಕೆಂಬ ಆಸೆಯನ್ನ ಅವಳ ಮುಂದಿಟ್ಟಿದ್ದೆ.

    ಅವಳ ಸಹನೆಯ ಕಟ್ಟೆಯೊಡೆದಿತ್ತು .ಬಂಧನ ತೊರೆದು ಸಾಗಿದೆ ಬದುಕು .ಅವಳಿಷ್ಟದ ಹಾಗೆ ಬದುಕು ಕಟ್ಟಲಿ. ಇನ್ನು ಹೇಗಿದ್ದರೂ ಮತ್ತೆ ಜೋಡಣೆಯಾದರೆ ಅದು ತೇಪೆ ಹಚ್ಚಿದ ಹಾಗೆ .ಮತ್ತೆಲ್ಲಿ ಒಡೆಯುತ್ತದೆಯೋ ಅನ್ನೋ ಭಯ ಖಂಡಿತ ಬಿದೆ. ನೀವೇನಾದರೂ ಪ್ರೀತಿಸಿದರೆ ಅವರಿಗೆ ಮೊದಲು ಸ್ವಾತಂತ್ರ ನೀಡಿದಾಗ ಮಾತ್ರ ನಿಜವಾದ ಪ್ರೀತಿ ಅರಳುತ್ತೆ. ಧನ್ಯವಾದ ಸರ್, ಮಾತಿಗೆ ಕಿವಿಯಾದದಕ್ಕೆ. ಇನ್ನೊಂದಿಷ್ಟು ಕಿವಿಗೆ ತಲುಪಿಸಿ .ನೋವು ನನ್ನೊಬ್ಬನಿಗೆ ಮುಗಿಯಲಿ, ಮುಂದುವರಿಯುವುದು ಬೇಡ.”
    ಪ್ರಶ್ನೆಗಳನ್ನ ಹೊತ್ತು ಸಾಗುತ್ತಲಿದ್ದೇನೆ

    ಧೀರಜ್ ಬೆಳ್ಳಾರೆ

    Share Information
    Advertisement
    Click to comment

    Leave a Reply

    Your email address will not be published. Required fields are marked *