Connect with us

FILM

ತಮಿಳು ಬಿಗ್ ಬಾಸ್ ಮಾಜಿ ಸ್ಪರ್ಧಿ ನಟಿ ಯಶಿಕಾ ಆನಂದ್ ಕಾರು ಅಪಘಾತ – ಸ್ನೇಹಿತೆ ಸ್ಥಳದಲ್ಲೇ ಸಾವು

ಚೆನ್ನೈ ಜುಲೈ 25: ನಟಿ ಯಶಿಕಾ ಆನಂದ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಆಕೆಯ ಸ್ನೇಹಿತೆ ದಾರುಣವಾಗಿ ಸಾವನ್ನಪ್ಪಿದ ಘಟನೆ ಚೆನ್ನೈನಲ್ಲಿ ನಡೆದಿದೆ.


ತಮಿಳು ಬಿಗ್ಬಾಸ್ ಖ್ಯಾತಿಯ ನಟಿ ಯಶಿಕಾ ಆನಂದ ಅವರ ಕಾರು ಶನಿವಾರ ಮಧ್ಯರಾತ್ರಿ ತಮಿಳುನಾಡಿನ ಚೆಂಗಲಪಟ್ಟು ಜಿಲ್ಲೆಯ ಮಾಮಲ್ಲಪುರಂ ಬಳಿ ಅಪಘಾತಕ್ಕೀಡಾಗಿದೆ.


ಈ ಅಪಘಾತದಲ್ಲಿ ಯಶಿಕಾ ಆನಂದ ಅವರ ಸ್ನೇಹಿತೆ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಯಶಿಕಾಗೆ ಗಂಭೀರ ಗಾಯಗಳಾ ಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಮೃತಳನ್ನು ಹೈದರಾಬಾದ್ ಮೂಲದ ಭವಾನಿ(28) ಎಂದು ಗುರುತಿಸಲಾಗಿದೆ. ಕಾರಿನಲ್ಲಿ ಇಬ್ಬರು ಯುವಕರು ಸಹ ಇದ್ದರು ಎಂದು ತಿಳಿದುಬಂದಿದೆ. ಯಶಿಕಾ ಮತ್ತು ಯುವಕರಿಗೆ ಗಂಭೀರ ಗಾಯಗಳಾ ಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅತಿ ವೇಗವೇ ಅಪಘಾ ತಕ್ಕೆ ಕಾರಣ ಎನ್ನಲಾಗಿದೆ.

 

ವೇಗದಿಂದ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದು ಅಪಘಾ ತ ಸಂಭವಿಸಿದೆ. ಅಪಘಾತವನ್ನು ನೋಡಿದ ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿ, ಗಾಯಗೊಂಡಿದ್ದವರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.