LATEST NEWS
ದಿನಕ್ಕೊಂದು ಕಥೆ- ನಂಬೋದ್ಯಾರನ್ನಾ
ನಂಬೋದ್ಯಾರನ್ನಾ
ಇಲ್ಲಿ ತಪ್ಪು ಯಾರದ್ದು ಅನ್ನೋದು ಗೊತ್ತಿಲ್ಲ .ನನ್ನೊಳಗಿನ ‘ನಾನು’ ಅನ್ನುವವನು ಎಲ್ಲರನ್ನು ಒಂದೇ ತೆರದಿ ನೋಡುತ್ತಿದ್ದ. ಹಾಗೆ ವರ್ತಿಸುತ್ತಿದ್ದ. ಮನೆಯ ಜಗಲಿಯಲ್ಲಿ ದಿನವೂ ಮಲಗುವ ಜಿಮ್ಮಿಯನ್ನು, ಅಂಗಳದ ಹೂಗಿಡಗಳನ್ನು ,ಮಾರ್ಗ ಬದಿಯ ಮರವನ್ನು, ಹಂಚಿನ ಮಾಡಿನ ಮೇಲೆ ಕೂಗುವ ಕಾಗೆಯನ್ನು, ಎಲ್ಲವೂ ಇವನೊಂದಿಗೆ ಸಂಭಾಷಣೆ ನಡೆಸುತ್ತಿದ್ದವು.
ಅಲ್ಲಿ ಹೃದಯದ ಮಾತು ಪ್ರತಿಫಲಿಸುತ್ತದೆ. ಇದೇ ವಿಚಾರದಿಂದ ಮನುಷ್ಯರ ಜೊತೆ ಸಂಬಂಧ ಬೆಳೆಸಿದ. ಇಲ್ಲಿ ಹೃದಯದ ಕೆಲಸ ಕಡಿಮೆಯಾಗಲಾರಂಭಿಸಿತು. ಬುದ್ಧಿ ಮತ್ತು ನಾಲಗೆ ಮಾತನಾಡಿದವು. ಆಗಲೇ ಅಲ್ಲಿಗೆ ವ್ಯವಹಾರ, ಲಾಭ-ನಷ್ಟಗಳು ಲಗ್ಗೆ ಇಟ್ಟವು. ನನ್ನೊಳಗೆ “ನಾನು” ಇರೋ ಹಾಗೆ ಅವರೊಳಗೆ ‘ನಾನು’ ಇರುತ್ತವೆ ಅಲ್ವಾ? ಇದೇ ಸಮಸ್ಯೆಗೆ ಮೂಲ ಕಿಡಿಯಾಯಿತು.
ಇವನು ನೀಡಿದ ಪ್ರೀತಿಗೆ ವಾತಾವರಣದಿಂದ ಪ್ರೀತಿಯೇ ಪ್ರತಿಫಲವಾಗಿ ದೊರೆತರೆ, ಸಹಚರ್ಯ ಮಾನವನಿಂದ ಹಾಗೆ ಪ್ರೀತಿಯ ಬದಲು ಕುಹಕತನ, ವ್ಯಂಗ್ಯ, ದ್ವೇಷ-ಅಸೂಯೆ, ಅಸಹ್ಯ ಸಿಟ್ಟು ಜಗಳಗಲಕು ಪ್ರತಿಫಲನವಾಗಿ ಕಂಡವು . ಈಗ ಮಾತನ್ನು ತೊರೆದು ಮೌನವನ್ನು ಅವಲಂಬಿಸಿ ನಡೆದಿದ್ದಾನೆ. ಪ್ರಾಣಿ-ಪಕ್ಷಿಗಳು ಜೊತೆ ಮಾತ್ರ ಸಂಬಂಧ ಉಳಿಸಿಕೊಂಡಿದ್ದಾನೆ .
ಇದರಿಂದ ನಮಗೆ ಏನು ಅಂತ ,ನೀವು ಅಂದುಕೊಂಡಿರಬಹುದು ಆದರೆ ಅದು ತಪ್ಪು. ಯಾಕೆಂದರೆ ಅಂತವನೊಬ್ಬ ಮಾತಿನ ಜೊತೆಗಾರ ,ಹೃದಯ ಸ್ನೇಹಿತನ ಕಳೆದುಕೊಂಡು ಹೃದಯಹೀನರಾದೆವಷ್ಟೆ
ಧೀರಜ್ ಬೆಳ್ಳಾರೆ