Connect with us

FILM

ಬಾಲಿವುಡ್ ನ ಹಿರಿಯ ನಟ ದಿಲೀಪ್‌ ಕುಮಾರ್‌ ಇನ್ನಿಲ್ಲ

ಮುಂಬೈ, ಜುಲೈ 07: ಬಾಲಿವುಡ್‌ ಹಿರಿಯ ನಟ ದಿಲೀಪ್‌ ಕುಮಾರ್‌ ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ 98 ವರ್ಷದ ದಿಲೀಪ್‌ ಕುಮಾರ್‌ ಅವರನ್ನು ಎರಡು ದಿನಗಳ ಹಿಂದಷ್ಟೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪಾಕಿಸ್ತಾನದ ಪೇಶಾವರದಲ್ಲಿ ಡಿಸೆಂಬರ್‌ 11, 1922 ರಲ್ಲಿ ಜನಿಸಿದ್ದ ಮಹಮ್ಮದ್‌ ಯೂಸೂಫ್‌ ಖಾನ್‌ ವಿಭಜನೆ ವೇಳೆ ಭಾರತಕ್ಕೆ ಬಂದಿದ್ದು ಬಾಲಿವುಡ್‌ ಚಿತ್ರರಂಗದಲ್ಲಿ ತಮ್ಮನ್ನು ಗುರುತಿಸಿಕೊಂಡ ಬಳಿಕ ದಿಲೀಪ್‌ ಕುಮಾರ್‌ ಎಂಬ ಹೆಸರಿನಿಂದಲೇ ಖ್ಯಾತರಾಗಿದ್ದರು.

ಪತ್ನಿ ಸಾಯಿರಾಬಾನು ಜೊತೆ ಮುಂಬೈನಲ್ಲಿ ನೆಲೆಸಿದ್ದ ದಿಲೀಪ್‌ ಕುಮಾರ್‌ ಇಂದು ಬಾರದ ಲೋಕಕ್ಕೆ ತೆರಳಿದ್ದಾರೆ. ಹಿರಿಯ ನಟನ ನಿಧನಕ್ಕೆ ಬಾಲಿವುಡ್‌ ಚಿತ್ರರಂಗ ಕಂಬನಿ ಮಿಡಿದಿದೆ.