BELTHANGADI
ಭಾರೀ ಮಳೆ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟ ಮುಳುಗುವ ಭೀತಿ
ಮಂಗಳೂರು ಅಗಸ್ಟ್ 6: ಪಶ್ಚಿಮ ಘಟ್ಟದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟ ಮುಳುಗುವ ಭೀತಿ ಎದುರಾಗಿದೆ. ನೇತ್ರಾವತಿ ನದಿ ನೀರು ತುಂಬಿ ಹರಿಯುತ್ತಿದ್ದು ಸ್ನಾನಘಟ್ಟದ ಮೇಲ್ಬಾಗದವರೆಗೂ ನದಿ ನೀರು ಬರುತ್ತಿದೆ. ನದಿ ನೀರು ಅಪಾಯದ ಮಟ್ಟಮೀರಿ ಹರಿಯುತ್ತಿರೋದ್ರಿಂದ ನೇತ್ರಾವತಿ ಸ್ನಾನಘಟ್ಟದ ಬಳಿಗೆ ಭಕ್ತರಿಗೆ ಸಂಪೂರ್ಷವಾಗಿ ನಿಷೇಧ ಹೇರಲಾಗಿದೆ.ಪಶ್ಚಿಮ ಘಟ್ಟದಲ್ಲಿ ಇದೇ ರೀತಿ ಮಳೆ ಮುಂದುವರೆದರೆ ಸ್ನಾನಘಟ್ಟ ಸಂಪೂರ್ಣವಾಗಿ ಮುಖುಗಡೆಯಾಗುವ ಸಾಧ್ಯತೆ ಇದೆ.
ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲೂ ಭಾರಿ ಮಳೆಯಾಗುತ್ತಿದ್ದು, ಘಾಟಿಯ 2 ಮತ್ತು 3ನೇ ತಿರುವಿನಲ್ಲಿ ನಿನ್ನೆ ಸಂಜೆ ಉರುಳಿದ ಬಂಡೆ ಸರಿಸಲಾಗಿದ್ದು, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಬುಧವಾರ ರಾತ್ರಿ ಧರ್ಮಸ್ಥಳ ಠಾಣೆ ಎಸ್.ಐ. ಪವನ್ ಕುಮಾರ್ ನೇತೃತ್ವದಲ್ಲಿ ತೆರವು ಕಾರ್ಯ ನಡೆದಿದೆ.
ಬಣಕಲ್ ವ್ಯಾಪ್ತಿಯಲ್ಲಿ ತಡ ರಾತ್ರಿ ಸಣ್ಣಪುಟ್ಟ ಕುಸಿತ ಉಂಟಾಗಿದ್ದು ಮೂಡಿಗೆರೆ ವ್ಯಾಪ್ತಿಗೆ ಮಾಹಿತಿ ನೀಡಿ ತೆರವುಗೊಳಿಸಲಾಗಿದೆ. ವಾಹನ ಸಂಚಾರಕ್ಕೆ ಅನುವು ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.