Connect with us

    KARNATAKA

    ತಲಕಾವೇರಿಯ ಬ್ರಹ್ಮಗಿರಿಯಲ್ಲಿ ಭೂಕುಸಿತಕ್ಕೆ ಮಣ್ಣಿನಡಿ ಸಿಲುಕಿರುವ ಅರ್ಚಕರ ಕುಟುಂಬ

    ಕೊಡಗು ಅಗಸ್ಟ್ 6: ಕರಾವಳಿ ಹಾಗೂ ಮಲೆನಾಡಿನಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಅವಾಂತರಗಳನ್ನೇ ಸೃಷ್ಠಿಸಿದೆ. ಕೊಡಗಿನಲ್ಲಿ ಸುರಿದ ಮಳೆ ವರ್ಷಗಳ ಭೂಕುಸಿತ ಮತ್ತೆ ನೆನಪಿಸುವಂತೆ ಮಾಡಿದೆ.
    ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತಲಕಾವೇರಿಯಲ್ಲಿ ಭೂಕುಸಿತವಾಗಿದೆ. ನಾಲ್ಕು ಮಂದಿ ಕಾಣೆಯಾಗಿದ್ದಾರೆ ಎಂದು ಕೊಡಗು ಜಿಲ್ಲಾಡಳಿತ ತಿಳಿಸಿದೆ.


    ಆ ಪ್ರದೇಶದಲ್ಲಿ ಪ್ರಧಾನ ಅರ್ಚಕರೂ ಹಾಗೂ ಅವರ ಕುಟುಂಬಸ್ಥರು ವಾಸವಾಗಿದ್ದರು. ಈ ಪೈಕಿ ಓರ್ವ ಅರ್ಚಕರು ನೂತನವಾಗಿ ಭಾಗಮಂಡಲದಲ್ಲಿ ಮನೆ ನಿರ್ಮಿಸಿದ್ದಾರೆ. ಇನ್ನೋರ್ವ ಅರ್ಚಕರು ತಲಕಾವೇರಿಯ ಮನೆಯಲ್ಲಿ ತಮ್ಮ ಕುಟುಂಬದೊಂದಿಗೆ ನೆಲೆಸಿದ್ದರು.  ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್.ನಾರಾಯಣ ಆಚಾರ್, ಅವರ ಪತ್ನಿ, ಆನಂದತೀರ್ಥ ಮತ್ತು ಇಬ್ಬರು ಅಚ೯ಕರೂ ಸೇರಿದಂತೆ ಐವರು ಮಣ್ಣಿನ ಅಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ನಾರಾಯಣ ಆಚಾರ್‌ ಅವರ ನೇತೃತ್ವದಲ್ಲಿಯೇ ಪ್ರತಿ ವರ್ಷ ತೀರ್ಥೋದ್ಭವ ಸೇರಿದಂತೆ ಪ್ರಮುಖ ಪೂಜಾ ಕಾರ್ಯಗಳು ಈ ಪುಣ್ಯಕ್ಷೇತ್ರದಲ್ಲಿ ನಡೆಯುತ್ತಿದ್ದವು. ಅವರು ತಲಕಾವೇರಿಯೊಂದಿಗೆ ಭಾವನಾತ್ಮಕ ಸಂಬಂಧವಿಟ್ಟು ಕೊಂಡಿದ್ದಾರೆ. ಅದೇ ಕಾರಣಕ್ಕೆ ಅವರು ಅಲ್ಲಿಂದ ಸ್ಥಳಾಂತರ ಆಗಿರಲಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.


    ಎರಡು ಮನೆಗಳೂ ಸಂಪೂರ್ಣ ನೆಲಸಮವಾಗಿದ್ದು ಯಾವುದೇ ಕುರುಹು ಸಿಗುತ್ತಿಲ್ಲ. ಕಾರು ಹಾಗೂ ಅವರು ಸಾಕಿದ್ದ ಹಸುಗಳೂ ಮಣ್ಣು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ. ಸುಮಾರು 6 ಕಿ.ಮೀ ಉದ್ದಕ್ಕೆ ಬೆಟ್ಟದ ಸಾಲು ಕುಸಿದು ಬಿದ್ದಿದೆ.
    ನಿರಂತರ ಸುರಿಯುತ್ತಿರುವ ಮಳೆ ಹಾಗೂ ಗುಡ್ಡ ಜರಿತದಿಂದಾಗಿ ರಕ್ಷಣಾ ಕಾರ್ಯಕ್ಕೆ ತೊಡಕಾಗಿದೆ.


    ಸತತ ಮೂರನೇ ವರ್ಷವೂ ಕೊಡಗು ಜಿಲ್ಲೆಯು ಭೀಕರ ದುರಂತಕ್ಕೆ ತುತ್ತಾಗಿದೆ. ಕಳೆದ ಎರಡು ವರ್ಷವೂ ಇದೇ ರೀತಿ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿ ಮಹಾಮಳೆ ಸಾವು ನೋವಿಗೆ ಕಾರವಾಗಿತ್ತು. ಅದೇ ರೀತಿಯ ಕಹಿ ಘಟನೆಗಳು ಮತ್ತೆ ಮರುಕಳಿಸಿವೆ.
    ಭಾರೀ ಮಳೆಯಿಂದಾಗಿ ಕಾವೇರಿ ಹಾಗೂ ಲಕ್ಷ್ಮಣ ತೀರ್ಥ ನದಿಗಳು ಉಕ್ಕಿ ಹರಿಯುತ್ತಿದ್ದು, ಇದರೊಂದಿಗೆ ಭೂಕುಸಿತ ಹಾಗೂ ಪ್ರವಾಹವೂ ಉಂಟಾಗಿದೆ. ಭಾರೀ ಮಳೆಯಿಂದ ಕುಶಾಲನಗರ ಸಾಯಿ ಬಡವಾಣೆಯ ಹಾಗೂ ಕುವೆಂಪು ಬಡಾವಣೆಗಳು ಜಲಾವೃತವಾಗಿದ್ದು, ಅಲ್ಲಿದ್ದ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply