ಧರ್ಮಸ್ಥಳ ಮಹಾವೈಭವದ ಮುಖ್ಯ ವೇದಿಕೆ ಕುಸಿತ – ತಪ್ಪಿದ ಭಾರಿ ಅನಾಹುತ

ಧರ್ಮಸ್ಥಳ ಫೆಬ್ರವರಿ 14: ಧರ್ಮಸ್ಥಳ ಮಹಾವೈಭವದ ಮುಖ್ಯವೇದಿಕೆ ಇಂದು ಮಧ್ಯಾಹ್ನದ ಕುಸಿದಿದ್ದು, ಊಟದ ಸಮಯವಾಗಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದೆ.

ಇಂದು ಬೆಳಿಗ್ಗೆ ಪಂಚ ಮಹಾವೈಭವದ ಮುಖ್ಯವೇದಿಕೆಯಲ್ಲಿ ಪಂಚ ಮಹಾವೈಭವದಲ್ಲಿ ಬಾಹುಬಲಿಯ ಆಸ್ತಾನಕ್ಕೆ ಶರಣಗಾತಿಯ ಸನ್ನಿವೇಶ ನಡೆದಿತ್ತು. ನಂತರ ಸಭಾ ಕಾರ್ಯಕ್ರಮ ನಡೆದಿದ್ದು 12.30 ಸುಮಾರಿಗೆ ಸಭಾ ಕಾರ್ಯಕ್ರಮ ಮುಗಿದಿದ್ದು, ಈ ಸಂದರ್ಭದಲ್ಲಿ ವಿಶಾಲವಾದ ವೇದಿಕೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ನಂತರ ನಡೆದ ಸಭಾ ಕಾರ್ಯಕ್ರಮ ಮುಗಿದ ನಂತರ ಜನರ ಊಟಕ್ಕೆ ತೆರಳಿದ ಸಂದರ್ಭ ಈ ಮುಖ್ಯ ವೇದಿಕೆ ಸಂಪೂರ್ಣ ಕುಸಿದಿದೆ.

ವೇದಿಕೆ ಕುಸಿತಕ್ಕೆ ಪಂಚ ಮಹಾವೈಭವದ ವೈಭವದ ಸೆಟ್ ಸಂಪೂರ್ಣ ಹಾಳಾಗಿದ್ದು, ವೇದಿಕೆ ಸುಮಾರು 80 ರಷ್ಟು ಹಾನಿಯಾಗಿದೆ ಎಂದು ಹೇಳಲಾಗಿದೆ. ವೇದಿಕೆ ಕುಸಿತದಿಂದ ಗಾಯಗಳಾದ ಬಗ್ಗೆ ಈವರೆಗೆ ಯಾವುದೇ ವರದಿಯಾಗಿಲ್ಲ.

ಜನರು ಊಟಕ್ಕ ತೆರಳಿದ್ದ ಸಂದರ್ಭ ಈ ಘಟನೆ ನಡೆದಿರುವ ಹಿನ್ನಲೆಯಲ್ಲಿ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.