ಪ್ರಾಣ ಹೋದರು ಯಡಿಯೂರಪ್ಪ ಅಪರೇಷನ್ ಕಮಲ ಬಿಡಲ್ಲ – ಜನಾರ್ಧನ ಪೂಜಾರಿ 

ಮಂಗಳೂರು ಫೆಬ್ರವರಿ 14: ಪ್ರಾಣ ಹೋದರೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಆಪರೇಷನ್ ಮಾಡುವುದು ಬಿಡಲ್ಲ, ಅದು ಅವರಿಗೆ ಹವ್ಯಾಸವೇ ಆಗಿ ಹೋಗಿದೆ ಎಂದು ಕಾಂಗ್ರೇಸ್ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಪರೇಷನ್ ಕಮಲ ಮಾಡಲು ಹೋಗಿ ಅವರ ಪಕ್ಷವನ್ನು ಅವರೇ ನಾಶ ಮಾಡುತ್ತಿದ್ದಾರೆ. ರಾಷ್ಟ್ರ ಮಟ್ಟದಲ್ಲೂ ಯಡಿಯೂರಪ್ಪನವರಿಗೆ ಕೆಟ್ಟ ಹೆಸರು ತಂದಿದೆ. ಪಕ್ಷಕ್ಕೂ ಕೆಟ್ಟ ಹೆಸರು ತಂದಿದ್ದಾರೆ. ಇನ್ನಾದರೂ ಆಪರೇಷನ್ ಕಮಲ ಬಿಡಲಿ, ಯಡಿಯೂರಪ್ಪ ತಕ್ಷಣ ಜನರ ಕ್ಷಮೆಯಾಚಿಸಲಿ ಎಂದು ಜನಾರ್ಧನ ಪೂಜಾರಿ ಸಲಹೆ ನೀಡಿದರು.

ಅಪರೇಷನ್ ಕಮಲ ಆಡಿಯೋ ಟೇಪ್ ಪ್ರಕರಣವನ್ನು ಬಿಜೆಪಿಯವರು ಒಪ್ಪಲಿ ಬಿಡಲಿ ತನಿಖೆ ಆಗಲೇಬೇಕು, ಅದರಲ್ಲಿ ಕಾಂಗ್ರೆಸ್ ತಪ್ಪು ಮಾಡಿದರೂ ಸತ್ಯಾಂಶ ಹೊರಬರಲಿ, ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬಹುದು, ದೂರು ನೀಡಿಯೇ ತನಿಖೆ ಆಗಬೇಕೆಂದೇನಿಲ್ಲ ಎಂದು ಕಾಂಗ್ರೇಸ್ ಹಿರಿಯ ಮುಖಂಡ ಜನಾರ್ಧ ಪೂಜಾರಿ ಹೇಳಿದರು.

ಸದ್ಯ ಎಲ್ಲರಲ್ಲೂ ಒಂದು ಸಂಶಯವಿದೆ, ಅದು ನಿವಾರಣೆಯಾಗಲಿ ಬಿಜೆಪಿಯವರು ಯಾವ ತನಿಖೆಗೆ ಒತ್ತಾಯಿಸುತ್ತಾರೆ ಅದು ಆಗಲಿ ಒಟ್ಟಿನಲ್ಲಿ ಜನತೆಗೆ ಸತ್ಯಾಂಶ ತಿಳಿಸೋದು ಶಾಸಕರ ಕರ್ತವ್ಯ ಎಂದು ಹೇಳಿದರು. ಸ್ಪೀಕರ್ ಸದನದ ನಿರ್ಣಯದ ಮೇಲೆ ತೀರ್ಮಾನ ಕೈಗೊಳ್ಳಲಿ, ಸದನದ ನಿರ್ಣಯಕ್ಕೆ ಸ್ಪೀಕರ್ ಅವಕಾಶ ಕೊಡಲಿ ಎಂದರು.

ಅತೃಪ್ತ ಶಾಸಕರಿಗೆ ಸಿದ್ದರಾಮಯ್ಯ ಬೆಂಬಲ ಆರೋಪದ ಬಗ್ಗೆ ಮಾತನಾಡಿದ ಪೂಜಾರಿ ಸಿದ್ದರಾಮಯ್ಯ ಕಾಂಗ್ರಸ್ ಗೆ  ಇನ್ನೊಂದು ಶನಿ ಇದ್ದ ಹಾಗೆ ಅವರಿಗೆ ಯಾವಾಗ ಬುದ್ಧಿ ಬರುತ್ತೋ ಪರಮಾತ್ಮನಿಗೇ ಗೊತ್ತು ಎಂದರು.

ಮಾಜಿ ಪ್ರಧಾನಿ ದೇವೆಗೌಡ ವಿರುದ್ಧ ಶಾಸಕ ಪ್ರೀತಂ ಗೌಡ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸದ ಜನಾರ್ಧನ ಪೂಜಾರಿ ಯಾರೇ ಆಗಲಿ ಈ ಮಾತು ಆಡಬಾರದು, ಅದನ್ನು ದೇವರೂ ಮೆಚ್ಚಲಾರರು, ಶಾಸಕ ಪ್ರೀತಂ ಗೌಡ ನಿಗೆ ದೇವರು ಬಂದು ಹೇಳಿದ್ದಾನ, ನೀವು ಯಾವಾಗ ಹೋಗ್ತೀರಿ ಅಂತ ಗೊತ್ತುಂಟ ನಿಮಗೆ ? ಎಂದು ಪ್ರಶ್ನೆ ಮಾಡಿದರು.

Facebook Comments

comments