Connect with us

  BELTHANGADI

  ಅಡಿಕೆ ವ್ಯಾಪಾರಿ ಮನೆ ದರೋಡೆ ಪ್ರಕರಣ – ನಾಲ್ಕು ವರ್ಷಗಳ ಬಳಿ ಸಿಕ್ಕ ಕಳ್ಳರು

  ಧರ್ಮಸ್ಥಳ ಮೇ 28: ನಾಲ್ಕು ವರ್ಷಗಳ ಹಿಂದೆ ಕಳಂಜ ಗ್ರಾಮದ ನಿವಾಸಿ ಅಡಕೆ ವ್ಯಾಪಾರ ಅಚ್ಯುತ ಭಟ್ ಮನೆಗೆ ನುಗ್ಗಿ ಮನೆಯವರನ್ನು ಕಟ್ಟಿ ಹಾಕಿ ದರೋಡೆ ನಡೆಸಿದ ಪ್ರಕರಣದ ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸಿ ಅವರಿಂದ ದರೋಡೆ ಮಾಡಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.


  ಸೋಮವಾರ ಧರ್ಮಸ್ಥಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ! ಸಿ.ಬಿ. ರಿಶ್ಯಂತ್ ಅವರು ಈ ಮಾಹಿತಿ ನೀಡಿದರು. ಮುಂಡಾಜೆ ಗ್ರಾಮದನಿವಾಸಿಗಳಾದ ನವಾಜ್ (38) ರಿಯಾಜ್ ಹಾಗೂ ಬೆಂಗಳೂರಿನ ಕೃಷ್ಣ ಬಂಧಿತರು. ಇವರಿಂದ ಕಳವುಮಾಡಲಾಗಿದ್ದ 104 ಗ್ರಾಂ ಚಿನ್ನಾಭರಣ, 288 ಗ್ರಾಂ ಬೆಳ್ಳಿಯ ವಸ್ತುಗಳನ್ನು ಹಾಗೂ ರು. 25 ಸಾವಿರ ನಗದು ಮತ್ತು ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

  2020 ಜೂ. 6ರಂದು ರಲ್ಲಿ ಕಲ್ಲಂಜ ಗ್ರಾಮದ ನಿವಾಸಿ ಅಚ್ಯುತ ಭಟ್ ಎಂಬವರ ಮನೆಗೆ ನುಗ್ಗಿದ ದರೋಡೆಕೋರರು ಮನೆಯಲ್ಲಿದ್ದ ಅಚ್ಯುತ ಭಟ್, ಅವರ ತಾಯಿ ಹಾಗೂ ತಮ್ಮನ ಪತ್ನಿಯನ್ನು ಕಟ್ಟಿ ಮನೆಯಲ್ಲಿದ್ದ ನಗ-ನಗದು ದರೋಡೆ ಮಾಡಿ 3 ಪರಾರಿಯಾಗುದ್ದರು.
  ಆರೋಪಿಗಳು ಸುಮಾರು 30 -35 ಪವನ್ ಚಿನ್ನಾಭರಣ, ಒಂದು ಕೆ.ಜಿ. ಬೆಳ್ಳಿಯ ಆಭರಣಗಳನ್ನು ದರೋಡೆ ಮಾಡಿರುವು ದಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಿರತಂರ ತನಿಖೆ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗದ ಕಾರಣ ಸಿ ರಿಪೋರ್ಟ್ ಹಾಕಲಾಗಿತ್ತು.

  ಈ ನಡುವೆ ಆರೋಪಿಗಳು ಕದ್ದ ಚಿನ್ನವನ್ನು ಸ್ವಲ್ಪ ಸ್ವಲ್ಪವೇ ಮಾರಾಟ ಮಾಡಿ ತಮ್ಮ ಚಾಣಾಕ್ಷ್ಯತನ ತೋರಿಸಿದ್ದರು. ಈ ನಡುವೆ ಬಂಧಿತ ಆರೋಪಿ ರಿಯಾಜ್ ದಾಖಲೆ ಇಲ್ಲದೆ ಚಿನ್ನ ಮಾರಾಟ ಮಾಡಲು ಮುಂದಾದ ವೇಳೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

  Share Information
  Advertisement
  Click to comment

  You must be logged in to post a comment Login

  Leave a Reply