Connect with us

    LATEST NEWS

    ಮತ್ತೆ ಶುಕ್ರವಾರ ಅದೇ ಜಾಗದಲ್ಲಿ ನಮಾಜ್ ಮಾಡಿದರೆ ಬಜರಂಗದಳ ನೇರ ಕಾರ್ಯಾಚರಣೆ – ಬಜರಂಗದಳ ಎಚ್ಚರಿಕೆ

    ಮಂಗಳೂರು, ಮೇ 28: ಮಂಗಳೂರಿನ ಕಂಕನಾಡಿಯಲ್ಲಿ ನಡು ರಸ್ತೆಯೊಂದರಲ್ಲಿ ಯುವಕರು ನಮಾಜ್ ಮಾಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೆ ಇದೀಗ ಆಕ್ರೋಶ ವ್ಯಕ್ತವಾಗಿದ್ದು. ಇದೀಗ ಹಿಂದೂಪರ ಸಂಘಟನೆಗಳು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಎಚ್ಚರಿಕೆಯನ್ನು ನೀಡಿವೆ.


    ಕಂಕನಾಡಿಯ ಮ್ಯಾಕ್ ಮಾಲ್ ಹಿಂಭಾಗದ ಮಸೀದಿ ಆವರಣದ ರಸ್ತೆಯಲ್ಲಿ ಒಂದಷ್ಟು ಯುವಕರು ಕುಳಿತುಕೊಂಡು ನಮಾಜ್ ಮಾಡಿದ್ದರು. ಮಸೀದಿ ಒಳಭಾಗದಲ್ಲಿ ಫುಲ್ ಆಗಿದ್ದರಿಂದಲೋ ಏನೋ ಯುವಕರು ಹೊರಭಾಗದಲ್ಲಿಯೇ ಕುಳಿತು ನಮಾಜ್ ಮಾಡಿದ್ದರು. ಇದನ್ನು ಯಾರೋ ದೂರದ ಕಟ್ಟಡದಿಂದ ವಿಡಿಯೋ ಮಾಡಿದ್ದು, ಅದೀಗ ವೈರಲ್ ಆಗಿದೆ. ವಿಡಿಯೋ ವೈರಲ್ ಆಗಿದ್ದು ಮಾಧ್ಯಮಗಳಲ್ಲಿಯೂ ಸುದ್ದಿಯಾಗಿದೆ.

    ಘಟನೆ ಬಗ್ಗೆ ಮಂಗಳೂರಿನ ಬಜರಂಗದಳ ಘಟಕ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ನಮಾಜ್ ಕುರಿತಾಗಿ ಸಂಬಂಧಪಟ್ಟವರಿಗೆ ತಿಳಿಸಲಾಗಿದೆ. ಮುಂದಿನ ಶುಕ್ರವಾರ ಮತ್ತೆ ಅದೇ ಜಾಗದಲ್ಲಿ ನಮಾಜ್ ನಡೆದರೆ ನೇರವಾಗಿ ಬಜರಂಗದಳ ಇದರ ವಿರುದ್ಧ ನೇರ ಕಾರ್ಯಾಚರಣೆ ನಡೆಸಲಿದೆ ಎಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ ಎಂಬುದಾಗಿ ಬರೆಯಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply