LATEST NEWS
ದೇವಸ್ಥಾನಗಳಲ್ಲಿ ಬಳಸುವ ತುಪ್ಪಕ್ಕೆ ಗೋಶಾಲೆಗಳ ನಿರ್ಮಾಣಕ್ಕೆ ಒತ್ತಾಯಿಸಲು ಧರ್ಮಾಗ್ರಹ ಸಭೆಯಲ್ಲಿ ನಿರ್ಣಯ
ಮಂಗಳೂರು ಸೆಪ್ಟೆಂಬರ್ 30: ತಿರುಪತಿ ಲಡ್ಡುವಿನಲ್ಲಿ ಅಪವಿತ್ರ ಮಾಡಿ ಹಿಂದೂ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆಯಾಗಲು ಕಾರಣಕವಾಗಿರುವವರನ್ನು ಸಿಬಿಐ ತನಿಖೆ ಮೂಲಕ ಗುರಿತಿಸಿ ಕಠಿಣ ಶಿಕ್ಷೆ ನೀಡಬೇಕು ಮಂಗಳೂರಿನಲ್ಲಿ ನಡೆದ ಧರ್ಮಾಗ್ರಹ ಸಭೆಯಲ್ಲಿ ನಿರ್ಣಯಕೈಗೊಳ್ಳಲಾಗಿದೆ. ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನ, ಡೊಂಗರಕೇರಿಯಲ್ಲಿ ಸಾಧು ಸಂತರು, ದೇವಸ್ಥಾನದ ಪ್ರಮುಖರು, ಹಿಂದೂ ಬಾಂಧವರ ಸಮ್ಮುಖದಲ್ಲಿ ನಡೆದ ಧರ್ಮಾಗ್ರಹ ಸಭೆಯಲ್ಲಿ ಕೆಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಪ್ರಪಂಚದಾದ್ಯಂತ ಇರುವ ಹಿಂದುಗಳ ಶ್ರದ್ಧಾ ಕೇಂದ್ರವಾದ ತಿರುಪತಿ ವೆಂಕಟರಮಣ ದೇವರಿಗೆ ದನದ ಕೊಬ್ಬು, ಮೀನಿನ ಎಣ್ಣೆಯಿಂದ ಕೂಡಿದ ತುಪ್ಪದಿಂದ ತಯಾರಿಸಿದ ಲಡ್ಡುಗಳನ್ನು ಅರ್ಪಿಸಿದ್ದನ್ನು ಈ ಸಭೆಯು ಖಂಡಿಸುತ್ತದೆ. ಭಗವಂತನಿಗೆ ಈ ತರಹದಲ್ಲಿ ಅಪವಿತ್ರ ನೈವೇದ ತಯಾರಿಸಲು ಯಾರೆಲ್ಲಾ ಕಾರಣರಾಗಿದ್ದಾರೋ, ಕರ್ತವ್ಯ ಲೋಕವನ್ನು ಎಸಗಿದ್ದಾರೋ, ಇಡೀ ಹಿಂದೂ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆಯಾಗಲು ಕಾರಣರಾಗಿದ್ದಾರೋ ಅಂತಹವರನ್ನು ಸಿಬಿಐ ತನಿಖೆಯ ಮೂಲಕ ಗುರುತಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಎಂದು ಆಂಧ್ರಪ್ರದೇಶದ ಇಂದಿನ ಮುಖ್ಯಮಂತ್ರಿ ಶ್ರೀ ಚಂದ್ರಬಾಬು ನಾಯ್ಡು ರವರನ್ನು ಈ ಸಭೆಯು ಒತ್ತಾಯಿಸುತ್ತದೆ.
ಇನ್ನು ಮುಂದೆ ಯಾವುದೇ ರೀತಿಯಲ್ಲಿ ದೇವಸ್ಥಾನದಲ್ಲಿ ಅಪವಿತ್ರವಾಗದಂತೆ ಸರ್ವಕ್ರಮ ಕೈಗೊಳ್ಳಬೇಕೆಂದು ಅವರನ್ನು ಈ ಸಭೆಯು ಒತ್ತಾಯಿಸುತ್ತದೆ. ದೇವಸ್ಥಾನಕ್ಕೆ ಅವಶ್ಯಕತೆ ಇರುವ ತುಪ್ಪವನ್ನ ದೇವಸ್ಥಾನದ ಟ್ರಸ್ಟ್ ವತಿಯಿಂದಲೇ ತಯಾರು ಮಾಡಲು ಅನುಕೂಲವಾಗುವಂತೆ 25,000 ದೇಸಿ ಹಸುಗಳಿರುವ ಬೃಹತ್ ಗೋಶಾಲೆಯೊಂದನ್ನು ಪ್ರಾರಂಭಿಸಬೇಕಾಗಿ ತಿರುಮಲ ತಿರುಪತಿ ದೇವಸ್ಥಾನದವರನ್ನ ಈ ಸಭೆ ಒತ್ತಾಯಿಸುತ್ತದೆ.
ಅದರಂತೆ ದೇಶದ ಇತರೆ ದೇವಸ್ಥಾನಗಳಲ್ಲಿಯೂ ದೇವರ ವಿನಿಯೋಗಕ್ಕೆ ಅವಶ್ಯಕತೆ ಇರುವ ತುಪ್ಪ ತಯಾರಿಸಲು ಅಗತ್ಯ ದೇಶದ ದನಗಳ ಗೋಶಾಲೆಯನ್ನು ಆಯಾ ದೇವಸ್ಥಾನದವರು ಪ್ರಾರಂಭಿಸಬೇಕೆಂದು ಈ ಸಭೆಯಲ್ಲಿ ಒತ್ತಾಯಿಸುತ್ತದೆ. ಈ ರೀತಿಯಲ್ಲಿ ದೇವಸ್ಥಾನಗಳಲ್ಲಿ ಎಲ್ಲಾ ಆಚಾರವಿಧಿಗಳು ಧರ್ಮ ಸಮ್ಮತವಾಗಿ ನಡೆಯಲಿ ಎಂದು ಧರ್ಮಾಗ್ರಹ ಸಭೆಯು ನಿರ್ಣಯಿಸುತ್ತದೆ. ಈ ರೀತಿ ದೇವಸ್ಥಾನದಲ್ಲಿ ಅಪವಿತ್ರತೆಯಾಗಲು ಮುಖ್ಯ ಕಾರಣವೂ ಸರಕಾರಿ ಸುಪರ್ದಿಯಲ್ಲಿರುವ ದೇವಸ್ಥಾನಗಳು ಸರಕಾರದ, ರಾಜಕೀಯದವರ ಹಿಡಿತದಲ್ಲಿರುವುದರಿಂದವೆಂದು ಕಂಡು ಬರುತ್ತಿದ್ದು ದೇಶದ ಎಲ್ಲಾ ದೇವಸ್ಥಾನಗಳನ್ನು ರಾಜಕೀಯದವರ ಹಾಗೂ ಸರಕಾರದ ಹಿಡಿತದಿಂದ ಮುಕ್ತಿಗೊಳಿಸಿ ಸರ್ವ ಸಮ್ಮತ ರೀತಿಯಲ್ಲಿ ಹಿಂದೂ ಸಮಾಜಕ್ಕೆ ಹಸ್ತಾಂತರಿಸಬೇಕು ಅದಕ್ಕಾಗಿ ರಾಷ್ಟ್ರೀಯ ಧಾರ್ಮಿಕ ಪರಿಷತ್ತು ಮತ್ತು ರಾಜ್ಯ ಧಾರ್ಮಿಕ ಪರಿಷತ್ತನ್ನು ಸ್ಥಾಪಿಸಬೇಕೆಂದು ಈ ಸಭೆ ನಿರ್ಣಯಿಸುತ್ತದೆ. ದೀಪಕ್ಕೆ ಹಾಕುವ ಎಳ್ಳೆಣ್ಣೆ, ದೀಪದ ಎಣ್ಣೆ, ತೆಂಗಿನ ಎಣ್ಣೆಗಳು ಸಾಕಷ್ಟು ಕಲಬೆರಿಕೆಯಿಂದ ಕಂಡುಬರುತ್ತಿದ್ದು, ಎಲ್ಲಾ ದೇವಸ್ಥಾನಗಳಲ್ಲಿ ಪರಿಶುದ್ಧ ಎಣ್ಣೆ ತುಪ್ಪಗಳಿಂದ ದೀಪವನ್ನು ಹಚ್ಚಬೇಕೆಂದು ಈ ಸಭೆ ಎಲ್ಲಾ ದೇವಸ್ಥಾನದವರನ್ನು ವಿನಂತಿಸುತ್ತದೆ.