LATEST NEWS
ಕರಾವಳಿಯಲ್ಲಿ ಜಾತ್ರೆಗಳ ಪ್ರಾರಂಭದ ಜೊತೆ ಅನ್ಯಧರ್ಮೀಯರಿಗೆ ವ್ಯಾಪಾರ ಬಹಿಷ್ಕಾರ…!!
ಉಡುಪಿ ಡಿಸೆಂಬರ್ 06: ಕರಾವಳಿ ಮತ್ತೆ ಧರ್ಮದಂಗಲ್ ಪ್ರಾರಂಭವಾಗಿದ್ದು, ಇದೀಗ ಜಾತ್ರಾ ಮಹೋತ್ಸವಗಳ ಸೀಸನ್ ಪ್ರಾರಂಭವಾಗುತ್ತಿದ್ದಂತೆ ವ್ಯಾಪಾರ ಬಹಿಷ್ಕಾರದ ಕೂಗು ಕೇಳಿ ಬಂದಿದೆ.
ಕರಾವಳಿಯಲ್ಲಿ ಇದೀಗ ಜಾತ್ರಾಮಹೋತ್ಸವಗಳ ಸೀಸನ್ ಪ್ರಾರಂಭವಾಗಿದ್ದು, ಅದರ ಬೆನ್ನಲ್ಲೇ ಅನ್ಯಧರ್ಮೀಯರಿಗೆ ಜಾತ್ರೆಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂದು ಆಗ್ರಹ ಕೇಳಿ ಬಂದಿದೆ. ಕುಂದಾಪುರ ತಾಲೂಕಿನಲ್ಲಿ ನಡೆಯಲಿರುವ ಎರಡು ಮಹತ್ವದ ಜಾತ್ರೆಗಳಲ್ಲಿ ಈ ಬಹಿಷ್ಕಾರದ ಬಿಸಿ ತಟ್ಟಿದೆ. ಕರಾವಳಿಯಲ್ಲಿ ಅತಿ ದೊಡ್ಡ ಹಬ್ಬ ಎನಿಸಿರುವ ಕೋಟೇಶ್ವರದ ಕೊಡಿ ಹಬ್ಬ ಡಿಸೆಂಬರ್ 8ರಂದು ನಡೆಯಲಿದ್ದರೆ. ಡಿಸೆಂಬರ್ 9ರಂದು ಉಪ್ಪಂದ ಜಾತ್ರೆ ನಡೆಯಲಿದೆ. ಈಗಾಗಲೇ ಕೊಡಿ ಹಬ್ಬದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಿದಂತೆ ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದ್ದು. ಆಡಳಿತ ಮಂಡಳಿಗೆ ಮನವಿಯನ್ನು ನೀಡಿದೆ.
ಹಿಂದೂ ಸಮಾಜದ ಮೇಲೆ ನಿರಂತರ ದಾಳಿ ಹಾಗೂ ದೇಶದಲ್ಲಿ ಭಯೋತ್ಪಾದನೆ, ಲವ್ ಜಿಹಾದ್ ನಂತಹ ಪ್ರಕರಣ ಹೆಚ್ಚಿರುವ ಕಾರಣಕ್ಕೆ ಮುಸ್ಲಿಂ ವ್ಯಾಪಾರಿಗಳಿಗೆ ಹಿಂದೂ ಜಾತ್ರೆಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ. ಈ ಹಿನ್ನಲೆ ಈಗಾಗಲೇ ದೇವಸ್ಥಾನದ ಆಡಳಿತ ಮಂಡಳಿಗೆ ಮನವಿಯನ್ನು ಮಾಡಿದ್ದಾರೆ.
ಕೋಟೇಶ್ವರದ ಜಾತ್ರೆಯಲ್ಲಿ ಅನ್ಯಧರ್ಮಿಯರಿಗೆ ಅವಕಾಶ ಇಲ್ಲ ಎಂದು ಈಗಾಗಲೇ ದೇವಸ್ಥಾನದ ಆಡಳಿತ ಮಂಡಳಿ ನಿರ್ಧಾರ ಕೈಗೊಂಡಿದೆ. ಸಹಾಯಕ ಕಮಿಷನರ್ ಗೆ ನಿರ್ಣಯವನ್ನು ರವಾನೆ ಮಾಡಿದೆ.
ಇನ್ನು ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲೂ ಧರ್ಮ ದಂಗಲ್ ನಡೆಯಲಿದ್ದು, ಡಿ 9 10 11ರಂದು ನೆರವೇರಲಿರುವ ಜಾತ್ರೆ ದೇವಸ್ಥಾನದ ಆವರಣದಲ್ಲಿ ಅನ್ಯಧರ್ಮೀಯರ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂದು ಹಿಂದೂ ಸಂಘಟನೆಗಳು ಮನವಿ ಮಾಡಿವೆ.