FILM
ತಮಿಳು ನಟ ಧನುಷ್ ಮತ್ತು ಐಶ್ವರ್ಯ ರಜನಿಕಾಂತ್ ಗೆ ಡೈವೋರ್ಸ್ ಮಂಜೂರು ಮಾಡಿದ ನ್ಯಾಯಾಲಯ

ಚೆನ್ನೈ ನವೆಂಬರ್ 28: ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ ಮತ್ತು ನಟ ಧನುಷ್ ಅವರ 18 ವರ್ಷಗಳ ದಾಂಪತ್ಯಕ್ಕೆ ಕೊನೆಗೂ ಅಂತ್ಯಗೊಂಡಿದೆ. ಕೋರ್ಟ್ ಇಬ್ಬರಿಗೂ ಡೈವೋರ್ಸ್ ಮಂಜೂರು ಮಾಡುವ ಮೂಲಕ ಇದೀಗ ಕಾನೂನಿನ ಪ್ರಕಾರ ಇಬ್ಬರು ಬೆರೆ ಬೆರೆಯಾಗಿದ್ದಾರೆ.
ನಟ ಧನುಷ್ ಅವರು ನಿರ್ದೇಶಕ ಕಸ್ತೂರಿರಾಜಾ ಅವರ ಮಗನಾಗಿದ್ದು, ಐಶ್ವರ್ಯ ಅವರು ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ. 2004ರ ನವೆಂಬರ್ 18ರಂದು ವಿವಾಹವಾಗಿದ್ದ ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. 18 ವರ್ಷಗಳ ದಾಂಪತ್ಯ ಜೀವನವನ್ನು ಅಂತ್ಯಗೊಳಿಸುತ್ತಿರುವುದಾಗಿ 2022ರ ಸೆಪ್ಟೆಂಬರ್‌ನಲ್ಲಿ ಘೋಷಿಸಿದ್ದರು. ಬಳಿಕ, ಕಾನೂನಾತ್ಮಕವಾಗಿ ಬೇರೆಯಾಗಲು, ವಿಚ್ಛೇದನ ಪಡೆಯಲು ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು.

ಕಳೆದ ನವೆಂಬರ್ 21ರಂದು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಸುಭಾದೇವಿ ಮುಂದೆ ಹಾಜರಾಗಿದ್ದ ದಂಪತಿ ನಾವಿಬ್ಬರು ಒಟ್ಟಿಗೆ ಬದುಕುವುದು ಸಾಧ್ಯವಿಲ್ಲ, ವಿಚ್ಛೇದನ ನಿರ್ಧಾರ ಅಚಲವಾಗಿದೆ ಎಂದು ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ವಿಚ್ಛೇದನ ಮಂಜೂರು ಮಾಡಿದೆ. ಇಬ್ಬರೂ ಚೆನ್ನೈನ ಪೋಯಸ್ ಗಾರ್ಡನ್ ಪ್ರದೇಶದ ಸಮೀಪದ ಮನೆಗಳಲ್ಲೇ ವಾಸವಿದ್ದಾರೆ.