FILM
ಬಿಗ್ ಬಾಸ್ ನಲ್ಲಿ ಚಿಕನ್ ರುಚಿ ನೋಡಿದ ಧನರಾಜ್ ಆಚಾರ್
ಬೆಂಗಳೂರು ಡಿಸೆಂಬರ್ 25: ಬಿಗ್ ಬಾಸ್ ಸೀಸನ್ 11 ರಲ್ಲಿ ಧನರಾಜ್ ಆಚಾರ ಒಂದು ಅಚಾತುರ್ಯ ಮಾಡಿಕೊಂಡಿದ್ದಾರೆ. ಟಾಸ್ಕ್ ನಲ್ಲಿ ಗೊತ್ತಿಲ್ಲದೇ ಧನರಾಜ್ ಚಿಕನ್ ತಿಂದಿದ್ದಾರೆ.
ಬಿಗ್ ಬಾಸ್ ನಲ್ಲಿ ರೆಸಾರ್ಟ್ ಟಾಸ್ಕ್ ನೀಡಲಾಗಿದ್ದು, ಅದರಲ್ಲಿ ಧನರಾಜ್ ರೆಸಾರ್ಟ್ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸರಿಯಾದ ಊಟ ಸಿಗದ ಕಾರಣ ರೆಸಾರ್ಟ್ ಸಿಬ್ಬಂದ ಕದ್ದು ಮುಚ್ಚಿ ಊಟ ತಿನ್ನುತ್ತಿದ್ದರು. ಈ ನಡುವೆ ಧನರಾಜ್ ಅವರು ಗೊತ್ತಿಲ್ಲದೇ ಚಿಕನ್ ತಿಂದಿದ್ದಾರೆ. ರೆಸಾರ್ಟ್ ಟಾಸ್ಕ್ ನಿಭಾಯಿಸುವಾಗ ಆತುರದಲ್ಲಿ ಅವರು ಈ ಅವಾಂತರ ಮಾಡಿಕೊಂಡಿದ್ದಾರೆ.
ತಾವು ತಿಂದಿದ್ದು ಚಿಕನ್ ಎಂಬುದು ಗೊತ್ತಾದ ಬಳಿಕ ಕೂಡಲೇ ಹೋಗಿ ಬಾಯಿ ತೊಳೆದುಕೊಂಡಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಧನರಾಜ್ ಅವರ ಗಲಿಬಿಲಿ ಕಂಡು ಭವ್ಯಾ ಗೌಡ, ರಜತ್, ಮೋಕ್ಷಿತಾ ಮುಂತಾದವರು ಬಿದ್ದು ಬಿದ್ದು ನಕ್ಕಿದ್ದಾರೆ.