LATEST NEWS
ದೇಯಿ ಬೈದೆತಿ ಮೂರ್ತಿಗೆ ಅವಮಾನ : ಕಠಿಣ ಕ್ರಮಕ್ಕೆ ಸಂಸದ ನಳಿನ್ ಆಗ್ರಹ

ಮಂಗಳೂರು ಸೆಪ್ಟೆಂಬರ್ 12: ತುಳುನಾಡಿನ ಆರಾಧ್ಯ ಪುರುಷರಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದೆತಿ ಮೂರ್ತಿ ಬಳಿ ವಿಕೃತ ವರ್ತನೆ ತೋರಿ, ಸಾಮಾಜಿಕ ಜಾಲತಾಣದಲ್ಲಿ ಪೋಟೊ ಅಪ್‍ಲೋಡ್ ಮಾಡಿರುವುದು ಆಘಾತಕಾರಿ ವಿಷಯವಾಗಿದೆ. ಈಗಾಗಲೇ ಪೊಲೀಸರು ಆರೋಪಿಯನ್ನು ಬಂಧಿಸಿರುವುದು ಶ್ಲಾಘನೀಯ. ಹೀನ ಕೃತ್ಯ ಎಸಗಿದ ಮತಾಂಧ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಸಂಸದ ನಳಿನ್‍ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.
ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿ ಉಂಟು ಮಾಡುವ ಘಟನೆ ಕರಾವಳಿಯಲ್ಲಿ ಆಗಾಗ ನಡೆಯುತ್ತಿದೆ. ಪ್ರಗತಿಪರರ ಹೆಸರಿನಲ್ಲಿ ಕೆಲವರು ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಕಾರಣ ಮತಾಂಧರು ನಿರಾಂತಕವಾಗಿ ಇಂತಹ ಕೃತ್ಯ ಎಸಗುತ್ತಿದ್ದಾರೆ. ತಾಯಿ ದೇಯಿ ಬೈದೆತಿ ಮೂರ್ತಿ ಬಳಿ ಅನಾಗರಿಕ ವರ್ತನೆ ತೋರಿದ ಕೃತ್ಯವನ್ನು ಆಸ್ತಿಕರು ಸಹಿಸಲು ಸಾಧ್ಯವಿಲ್ಲ. ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಸಮಾಜದ ಶಾಂತಿ ಕದಡುವ ಇಂತಹ ಕೃತ್ಯ ಮರುಕಳಿಸದಂತೆ ಪೊಲೀಸರು ಎಚ್ಚರ ವಹಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
