MANGALORE
ಪದವು ಪಶ್ಚಿಮ ವಾರ್ಡಿನ ಕೋಡಂಗೆ ಭಾಗದಲ್ಲಿ 1.5 ಕೋಟಿ ವೆಚ್ಚದಲ್ಲಿ ರಾಜಕಾಲುವೆಯ ಅಭಿವೃದ್ಧಿಗೆ ಭೂಮಿ ಪೂಜೆ

ಮಂಗಳೂರು ಡಿಸೆಂಬರ್ 08: ಮಂಗಳೂರು ಮಹಾನಗರ ಪಾಲಿಕೆಯ ಪದವು ಪಶ್ಚಿಮ ವಾರ್ಡಿನ ಕೋಡಂಗೆ ಭಾಗದಲ್ಲಿ 1.5 ಕೋಟಿ ವೆಚ್ಚದಲ್ಲಿ ರಾಜಕಾಲುವೆಯ ಅಭಿವೃದ್ಧಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಕ್ತಿನಗರದ ಕೋಡಂಗೆಯ ಪ್ರಮುಖ ರಸ್ತೆಯ ರಾಜಕಾಲುವೆಯ ಅಭಿವೃದ್ಧಿಗೆ 1.5 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದ್ದು, ಈ ಪರಿಸರದ ಸಮಸ್ಯೆಗಳನ್ನು ಪರಿಹರಿಸುವ ದೃಷ್ಟಿಯಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಕಾಮತ್ ಹೇಳಿದರು.
ರಾಜ್ಯ ಸರಕಾರ, ಕೇಂದ್ರ ಸರಕಾರದಿಂದ ನಗರದ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಹಂಪನಕಟ್ಟೆ, ಪಿ.ವಿ.ಎಸ್, ಮಂಗಳಾದೇವಿ ರಸ್ತೆ ಮುಂತಾದ ಪ್ರಮುಖ ರಸ್ತೆಗಳನ್ನು ಸ್ಮಾರ್ಟ್ ರಸ್ತೆಯಾಗಿ ಅಭಿವೃದ್ಧಿಪಡಿಸುವ ಜೊತೆಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೂ ವಿಶೇಷ ಗಮನ ನೀಡಲಾಗಿದೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೇಟರ್ ವನಿತಾ ಪ್ರಸಾದ್, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಕಿಲಾ ಕಾವಾ, ಸ್ಥಳೀಯ ಮುಖಂಡರಾದ ವಿಜಯ್ ಶೆಣೈ, ರವಿಚಂದ್ರ, ಪ್ರಸಾದ್ ಆಚಾರ್ಯ, ಗೋಪಾಲ, ಪದ್ಮನಾಭ, ಶುಭಕರ್, ಬಾಬು ಶೆಟ್ಟಿ, ನಾಗೇಶ್, ಪುಷ್ಪ, ಸುಮನ, ಶೋಭಾ ಶೇಖರ್, ಲತಾ, ಸುನಿಲ್ ಅಂಗರಾಜು, ವಿಜಯ್ ಶೆಟ್ಟಿ, ರವೀಂದ್ರ, ದಿನೇಶ್ ರೈ, ಗಣೇಶ್ ಗೌಡ, ಪದ್ಮನಾಭ ಶೆಣೈ ಮುಂತಾದವರು ಉಪಸ್ಥಿತರಿದ್ದರು.