Connect with us

    DAKSHINA KANNADA

    ರೋಗಿಗಳಿಗೆ ಸ್ಪಂದನೆ ನೀಡುವ ನಿಟ್ಟಿನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆ ಅಭಿವೃದ್ಧಿ : ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ

    ಪುತ್ತೂರು, ಜೂನ್ 02: ಕಿಡ್ನಿ ರೋಗಿಗಳಿಗೆ ಸ್ಪಂದನೆ ನೀಡುವ ನಿಟ್ಟಿನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪ್ರಸ್ತುತ 6 ಡಯಾಲಿಸಿಸ್ ಮೆಷಿನ್ ಕಾರ್ಯಾಚರಿಸುತ್ತಿದ್ದು, ಮುಂದಿನ ವಾರದಲ್ಲಿ ಆರು ಡಯಾಲಿಸಿಸ್ ಮೆಷಿನ್ ರೋಟರಿ ಮೂಲಕ ಸರಕಾರಿ ಆಸ್ಪತ್ರೆಗೆ ಬರಲಿದೆ ಎಂದು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

    ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು ಶಾಸಕರು, ಈಗಾಗಲೇ ಕಡಬದಲ್ಲಿ ಮೂರು ಮೆಷಿನ್ ಇದ್ದು ಸರಿಯಾಗಿ ಕಾರ್ಯಾಚರಿಸಿದಲ್ಲಿ ಪುತ್ತೂರು ಆಸ್ಪತ್ರೆಯಲ್ಲಿ ಒತ್ತಡ ಕಡಿಮೆಯಾಗಲಿದೆ ಎಂದ ಅವರು, ಈಗಾಗಲೇ ಪುತ್ತೂರು ಡಯಾಲಿಸಿಸ್ ಕೇಂದ್ರದಲ್ಲಿ ದಿನವಹಿ 30 ರೋಗಿಗಳಿಗೆ ಡಯಾಲಿಸಿಸ್ ಮಾಡಲಾಗುತ್ತದೆ.

    ಒಟ್ಟು 60 ಮಂದಿ ರಿಜಿಸ್ಟ್ರೇಷನ್ ಮಾಡಿಕೊಂಡಿದ್ದು, 70 ಮಂದಿ ರೋಗಿಗಳು ವೈಟಿಂಗ್ ಲಿಸ್ಟ್ ನಲ್ಲಿದ್ದಾರೆ. ಮುಂದಿನ ವಾರದಲ್ಲಿ 6 ಮೆಷಿನ್ ರೋಟರಿ ಮೂಲಕದ ಬಂದರೆ ಒತ್ತಡ ಕಡಿಮೆಯಾಗಲಿದೆ. ಉಳಿದಂತೆ ಮೂರು ಡಯಾಲಿಸಿಸ್ ಮೆಷಿನ್ ಸ್ಪ್ಯಾರ್ ಬೇಕು. ಇದನ್ನು ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

    ಉಳಿದಂತೆ ಆಸ್ಪತ್ರೆಗೆ ಅನಸ್ತೇಸಿಯಾ ವರ್ಕಿಂಗ್ ಘಟಕ, ಮಾಡ್ಯುಲರ್ ಒಟಿಯ ಅಗತ್ಯತೆ ಇದೆ ಎಂದು ತಿಳಿಸಿದರು. ಇದನ್ನು ಒದಗಿಸಿಕೊಡಲಾಗುವುದು ಎಂದರು. ಎಲ್ಲಾ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಸರಕಾರಿ ಆಸ್ಪತ್ರೆ ತಾತ್ಕಾಲಿಕ ಸಿಬ್ಬಂದಿಗಳ ನೇಮಕಕ್ಕೆ ಡಿಎಚ್‍ಒಗಳಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದರು.

    ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಪ್ರಸ್ತಾವನೆ ಕಡತ ತಾಲೂಕು ಕಚೇರಿಯಲ್ಲಿತ್ತು. ಇದನ್ನು ಡಿಸಿ ಮೂಲಕ ರೆಕಮಂಡೇಷನ್ ಮಾಡಿ ಹೆಲ್ತ್ ಸೆಕ್ರೆಟರಿ ವರೆಗೆ ಕೊಂಡೊಯ್ಯುವ ಕೆಲಸ ಮಾಡಿದ್ದೇನೆ. ಮುಂದೆ ಕ್ಯಾಬಿನೆಟ್ ನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ತರುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದ ಅವರು, ಈಗಾಗಲೇ ಮೆಡಿಕಲ್ ಕಾಲೇಜು ಮಂಜೂರಾದ 40 ಎಕ್ರೆ ಜಾಗದಲ್ಲೇ 200 ಬೆಡ್ ನ ಆಸ್ಪತ್ರೆ ಜತೆಗೆ ಮೆಡಿಕಲ್ ಕಾಲೇಜು ಸ್ಥಾಪನೆಗೆ ಪ್ರಯತ್ನಿಸಲಾಗುವುದು.

    ಈಗ ಇರುವ ಸರಕಾರಿ ಆಸ್ಪತ್ರೆಯನ್ನು 100 ಬೆಡ್ ಆಸ್ಪತ್ರೆಯಾಗಿ ಉಳಿಸಿಕೊಳ್ಳಲಾಗುವುದು. ಜಾಗದ ಕೊರತೆ ಇರುವುದರಿಂದ ಹೀಗೆ ಮಾಡಲಾಗುವುದು ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಟಿಎಚ್‍ಒ ದೀಪಕ್ ಕುಮಾರ್, ವೈದ್ಯಾಧಿಕಾರಿ ಆಶಾ ಪುತ್ತೂರಾಯ, ಸಿಬ್ಬಂದಿಗಳು ಉಪಸ್ಥಿತರಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply