LATEST NEWS
ಕರಾವಳಿಯ ಎಲ್ಲಾ ಜಾತಿಯವರಿಗೂ ಅಭಿವೃದಿ ನಿಗಮ ಬೇಕು – ಯು.ಟಿ ಖಾದರ್
ಮಂಗಳೂರು ನವೆಂಬರ್ 18: ಬಿಜೆಪಿಯಿಂದ ಇದೀಗ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದು, ಚುನಾವಣೆಗಳು ಹತ್ತಿರ ಬಂದಾಗ ನಿಗಮಗಳ ಸ್ಥಾಪನೆಗಳನ್ನು ಆರಂಭಿಸುವ ಹೊಸ ಟ್ರೆಂಡ್ ನ್ನು ಪ್ರಾರಂಭಿಸಿದ್ದಾರೆ ಎಂದು ಮಾಜಿ ಸಚಿವ ಯು ಟಿ ಖಾದರ್ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿರಾ ಉಪಚುನಾವಣೆ ಬಂದಾಗ ಗೊಲ್ಲರ ಅಭಿವೃದ್ಧಿ ನಿಗಮ ಮಾಡಿದರು, ಬಸವಕಲ್ಯಾಣ ಚುನಾವಣೆ ಮುಂದಿಟ್ಟು ಮರಾಠಿ ಅಭಿವೃದ್ಧಿ ಪ್ರಾಧಿಕಾರ ಮಾಡ್ತಿದ್ದಾರೆ. ಈ ಮೂಲಕ ರಾಜ್ಯದ ಜನತೆಗೆ ಯಾರು ಜಾತಿ ಒಲೈಕೆ ಮಾಡ್ತಿರೋದು ಅನ್ನೋದು ಗೊತ್ತಾಗ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಜಾತಿಯವರು ಇದ್ದಾರೆ. ಎಲ್ಲಾ ಜಾತಿಯ ಅಭಿವೃದ್ಧಿ ನಿಗಮವೂ ಬೇಕು.
ಉಪಚುನಾವಣೆ ಬಂದ್ರೆ ಮಾತ್ರ ಅಭಿವೃದ್ಧಿ ನಿಗಮ ಘೋಷಣೆ ಮಾಡುತ್ತಿದ್ದು. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಜಾತಿಯವರಿಗೂ ಅಭಿವೃದ್ಧಿ ನಿಗಮ ಬೇಕು. ರಾಜ್ಯದ ಬೊಕ್ಕಸದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯವರಿಗೂ ಹಕ್ಕಿದೆ ಎಂದು ಯು ಟಿ ಖಾದರ್ ಹೇಳಿದರು.