Connect with us

LATEST NEWS

ಡೆಂಗ್ಯೂ ಹಿನ್ನೆಲೆ ದೇವಸ್ಥಾನಗಳಲ್ಲಿ ಸ್ವಚ್ಚತೆ ಕಾಪಾಡಲು ಸೂಚನೆ

ಡೆಂಗ್ಯೂ ಹಿನ್ನೆಲೆ ದೇವಸ್ಥಾನಗಳಲ್ಲಿ ಸ್ವಚ್ಚತೆ ಕಾಪಾಡಲು ಸೂಚನೆ

ಮಂಗಳೂರು ಜುಲೈ 31 : ಜಿಲ್ಲೆಯಾದ್ಯಂತ ಡೆಂಗ್ಯೂ ಪ್ರಕರಣಗಳು ಕಂಡು ಬರುತ್ತಿದೆ. ಈ ರೋಗವನ್ನು ತಡೆಗಟ್ಟಲು ಸೊಳ್ಳೆಗಳ ನಿರ್ಮೂಲನೆ ಮಾಡುವ ಕೆಲಸವನ್ನು ಮಾಡಬೇಕಾಗಿದೆ. ಸೊಳ್ಳೆಗಳು ನೀರು ನಿಲ್ಲುವ ಸ್ಥಳಗಳಲ್ಲಿ ಮೊಟ್ಟೆ ಇಟ್ಟು 7 ರಿಂದ 10 ದಿನಗಳಲ್ಲಿ ಸೊಳ್ಳೆಗಳಾಗಿ ಪರಿವರ್ತನೆ ಹೊಂದುತ್ತದೆ. ಹಾಗಾಗಿ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಸೊಳ್ಳೆಗಳ ಸಂತನೋತ್ಪತ್ತಿಗೆ ಪೂರಕ ವಾತಾವರಣ ಉಂಟಾಗದಂತೆ ಎಚ್ಚರವಹಿಸಲು ಸೂಚಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ ಹಿಂದೂ ಧಾರ್ಮಿಕ ಸಂಸ್ಥೆಗಳ ಅಧೀನಕೊಳಪಟ್ಟ ದೇವಸ್ಥಾನದಲ್ಲಿ ದಿನನಿತ್ಯ ನಡೆಯುವ ಅಭಿಷೇಕಗಳು, ನಾಗರ ಪಂಚಮಿ ಹಾಗೂ ಇನ್ನಿತರ ದಿನಗಳಂದು ನಡೆಸುವ ಸೀಯಾಳ ಅಭಿಷೇಕದ ಸಂದರ್ಭದಲ್ಲಿ ಸೀಯಾಳದ ನೀರು ಸರಿಯಾಗಿ ಹರಿದು ಹೋಗುವಂತೆ ಹಾಗೂ ದೇವಸ್ಥಾನದಲ್ಲಿ ಉಪಯೋಗಿಸುವ ತಟ್ಟೆ-ಲೋಟಗಳು ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಆಡಳಿತದಾರರು ಪರಿಶೀಲನೆ ನಡೆಸಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಸೊಳ್ಳೆಗಳ ಸಂತನೋತ್ಪತ್ತಿಗೆ ಪೂರಕವಾಗುವ ನೀರು ನಿಲ್ಲುವ ಪ್ರದೇಶಗಳನ್ನು ದೇವಸ್ಥಾನದ ಹಿಂಭಾಗ/ಮುಂಭಾಗಗಳಲ್ಲಿ ಪರಿಶೀಲಿಸಿ ಕೂಡಲೇ ನಿವಾರಿಸಬೇಕು.

ಒಂದು ವೇಳೆ ನೀರು ನಿಂತಿರುವುದು ಕಂಡು ಬಂದಲ್ಲಿ ಅದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಸೀಯಾಳದ ಚಿಪ್ಪನ್ನು ಎರಡು ಹೋಳುಗಳಾಗಿ ಮಾಡಿ, ಮಹಾನಗರ ಪಾಲಿಕೆ/ ಪಟ್ಟಣಪಂಚಾಯತ್/ ಗ್ರಾಮ ಪಂಚಾಯತ್/ ಪುರಸಭೆ/ ನಗರಸಭೆ ಇವರಿಗೆ ತೆರವುಗೊಳಿಸಲು ತಿಳಿಸಿ ಸ್ವಚ್ಚತೆ ಕಾಪಾಡಬೇಕು. 1-2 ದಿನಗಳಲ್ಲಿ ನೀರನ್ನು ತೆರವುಗೊಳಿಸದೇ ಇದ್ದು ಅದರಿಂದ ಲಾರ್ವಗಳು ಉತ್ಪತ್ತಿಯಾಗಿರುವುದು ಕಂಡುಬಂದಲ್ಲಿ, ಕಾರಣರಾದ ದೇವಾಲಯದ ಆಡಳಿತದಾರರ/ ಕಾರ್ಯನಿರ್ವಹಣಾಧಿಕಾರಿಯವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *