Connect with us

    LATEST NEWS

    ವಾಹನ ಸವಾರರೇ ಎಚ್ಚರ..!! ಇನ್ನೂ ಸಂಚಾರ ನಿಯಮ ಉಲ್ಲಂಘಿಸಿದರೆ 6 ತಿಂಗಳು ಜೈಲು

    ವಾಹನ ಸವಾರರೇ ಎಚ್ಚರ..!! ಇನ್ನೂ ಸಂಚಾರ ನಿಯಮ ಉಲ್ಲಂಘಿಸಿದರೆ 6 ತಿಂಗಳು ಜೈಲು

    ಮಂಗಳೂರು ಅಗಸ್ಟ್ 1: ಇನ್ನು ಮುಂದೆ ಸಂಚಾರಿ ನಿಯಮ ಉಲ್ಲಂಘಿಸುವವರು ಭಾರಿ ಮೊತ್ತದ ದಂಡ ತೆರಬೇಕಾಗಿದೆ. ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದ ಮೋಟಾರು ವಾಹನ (ತಿದ್ದುಪಡಿ) ಮಸೂದೆ 2019ಕ್ಕೆ ಸಂಸತ್ತು ಬುಧವಾರ ಅನುಮೋದನೆ ನೀಡಿದೆ.

    ಕಳೆದ ವಾರ ಲೋಕಸಭೆಯಲ್ಲಿ ಈ ಮಸೂದೆಗೆ ಒಪ್ಪಿಗೆ ದೊರೆತಿತ್ತು, ರಾಜ್ಯ ಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಗೆ ಬಹುಮತ ಇಲ್ಲದಿದ್ದರೂ ಕೆಲ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡ ಸರಕಾರ ಮಸೂದೆ ಅಂಗೀಕಾರವಾಗುವಂತೆ ನೋಡಿಕೊಂಡಿದೆ. ರಾಜ್ಯಸಭೆಯಲ್ಲಿ ಮಸೂದೆ ಪರ 108 ಹಾಗೂ ಮಸೂದೆ ವಿರುದ್ದ 13 ಮತಗಳು ಚಲಾವಣೆಯಾದವು.

    ಈ ಮೂಲಕ ಮೋಟಾರು ವಾಹನ (ತಿದ್ದುಪಡಿ) ಮಸೂದೆ 2019 ಜಾರಿಗೆ ಬಂದಿದೆ. ಈ ಕಾಯ್ದೆ ಪ್ರಕಾರ ಸೀಟ್‌ ಬೆಲ್ಟ್‌, ಹೆಲ್ಮೆಟ್‌ ಇಲ್ಲದೆ ವಾಹನ ಚಲಾವಣೆ ಮಾಡಿದರೆ 1000 ರೂಪಾಯಿವರೆಗೆ ದಂಡ ಅಲ್ಲದೆ 3 ತಿಂಗಳ ಡ್ರೈವಿಂಗ್ ಲೈಸೆನ್ಸ್ ರದ್ದು , ಅಲ್ಲದೆ ಕುಡಿದು ವಾಹನ ಚಲಾಯಿಸಿದರೆ 6 ತಿಂಗಳ ಜೈಲು ಶಿಕ್ಷೆ ನೀಡುವ ಪ್ರಸ್ತಾವಗಳನ್ನು ತಿದ್ದುಪಡಿ ಮಸೂದೆ ಹೊಂದಿದೆ.

    ನೂತನ ನಿಯಮದನ್ವಯ ವಿಧಿಸುವ ದಂಡ ಈ ರೀತಿ ಇದೆ

    * ಸಂಚಾರ ನಿಯಮ ಉಲ್ಲಂಘನೆಗೆ- 500 ದಂಡ
    * ತುರ್ತು ವಾಹನಗಳಿಗೆ ದಾರಿ ಬಿಡದಿದ್ದರೆ – 10,000 ದಂಡ, 6 ತಿಂಗಳು ಜೈಲು
    * ಅತಿ ವೇಗದ ಚಾಲನೆ – 1,000 ದಿಂದ 2,000 ದಂಡ, 3 ತಿಂಗಳು ಜೈಲು
    * ಕುಡಿದು ವಾಹನ ಚಾಲನೆ – 10,000 ದಂಡ, 6 ತಿಂಗಳು ಜೈಲು
    * ಹೆಲ್ಮೆಟ್ ಧರಿಸದೆ ಡ್ರೈವಿಂಗ್ – 1,000 ದಂಡ
    * ವಿಮೆ ರಹಿತ ವಾಹನ ಚಾಲನೆ – 2,000 ದಂಡ
    * ಅಪ್ರಾಪ್ತರಿಂದ ವಾಹನ ಚಾಲನೆ – 25,000 ದಂಡ (ಪೋಷಕರ ವಿರುದ್ಧ ಕಾನೂನು ಕ್ರಮ)
    * ಲೈಸೆನ್ಸ್ ಇಲ್ಲದೆ ಅನಧಿಕೃತ ವಾಹನ ಚಾಲನೆ – 5,000 ದಂಡ
    * ಅತಿ ವೇಗದ ಚಾಲನೆಗೆ – 1,000 ವರೆಗೆ ದಂಡ
    * ವಾಹನಗಳ ಅಪಘಾತವಾದರೆ ಚಾಲಕರಿಗೆ – 10 ಲಕ್ಷದ ವರೆಗೆ ದಂಡ
    * ಓವರ್ ಲೋಡಿಂಗ್- 20,000 ರೂ.
    * ವಾಹನ ಪರವಾನಿಗೆ ಉಲ್ಲಂಘಿಸುವ ಟ್ಯಾಕ್ಸಿ ಕಂಪನಿಗಳಿಗೆ- 1 ಲಕ್ಷ ದಂಡ
    * ಸಿಗ್ನಲ್ ಜಂಪ್, ಚಾಲನೆ ವೇಳೆ ಮೊಬೈಲ್ ಬಳಕೆ – 5000 ದಂಡ, 6 ತಿಂಗಳು ಜೈಲು ಇತ್ಯಾದಿ

    Share Information
    Advertisement
    Click to comment

    You must be logged in to post a comment Login

    Leave a Reply