LATEST NEWS
ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಾಹಂ ಮೇಲೆ 10 ಕೋಟಿ ಮಾನನಷ್ಟ ಮೊಕದ್ದಮೆ – ಪ್ರಮೋದ್ ಮಧ್ವರಾಜ್
ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಾಹಂ ಮೇಲೆ 10 ಕೋಟಿ ಮಾನನಷ್ಟ ಮೊಕದ್ದಮೆ – ಪ್ರಮೋದ್ ಮಧ್ವರಾಜ್
ಉಡುಪಿ ಮಾರ್ಚ್ 22 : ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಮೇಲೆ 10 ಕೋಟಿ ರೂಪಾಯಿ ಮಾನನಷ್ಟ ಮೊಕ್ಕದ್ದಮೆ ಹೂಡಲು ಚಿಂತನೆ ನಡೆಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಇನ್ನು ಮೂರು ದಿನಗಳೊಳಗಾಗಿ ಟಿ.ಜೆ ಅಬ್ರಾಹಂ ಸಾರ್ವಜನಿಕವಾಗಿ ಪತ್ರಿಕಾಗೋಷ್ಠಿಯನ್ನು ಕರೆದು ನನ್ನ ಮೇಲೆ ಹೊರಿಸಿದ ಆರೋಪಗಳ ಬಗ್ಗೆ ಕ್ಷಮೆ ಕೇಳಬೇಕು ಇಲ್ಲದಿದ್ದರೆ ಅವರ ಮೇಲೆ 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಲಿದ್ದೆನೆ ಎಂದು ತಿಳಿಸಿದರು.
ಈ ಕುರಿತಾಗಿ ಈಗಾಗಲೇ ಟಿ.ಜೆ ಅಬ್ರಾಹಂ ಅವರಿಗೆ ಲಾಯರ್ ಮೂಲಕ ನೋಟಿಸ್ ಜಾರಿ ಮಾಡಲಾಗಿದ್ದು ಅವರಿಗೆ ಕ್ಷಮೆ ಕೇಳಲು ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಾಹಂ ಸಚಿವ ಪ್ರಮೋದ್ ಮಧ್ವರಾಜ್ ಅವರ 1.10 ಕೋಟಿ ಮೌಲ್ಯದ ಜಮೀನಿಗೆ ಸಿಂಡಿಕೇಟ್ ಬ್ಯಾಂಕ್‌ನಿಂದ 193 ಕೋಟಿ ಸಾಲ ನೀಡಲಾಗಿದ್ದು, ಇದರಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದರು. ಇದು ರಾಷ್ಟ್ರ ಮತ್ತು ರಾಜ್ಯ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗಿತ್ತು. ಈ ಹಿನ್ನಲೆಯಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಈಗ ಅಬ್ರಾಹಂ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲು ತಯಾರಿ ನಡೆಸಿದ್ದಾರೆ.
ಟಿ.ಜೆ ಅಬ್ರಾಹಂ ನನ್ನ ವಿರುದ್ದ ರಾಜ್ಯ ಮತ್ತು ರಾಷ್ಟ್ರೀಯ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡಿ ನನ್ನ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿದರು.ನಾನು ನನ್ನ ಎಲ್ಲಾ ವ್ಯವಹಾರಗಳನ್ನು ಕಾನೂನುಬದ್ದವಾಗಿ ನಡೆಸುತ್ತಿದ್ದು, ನನ್ನ ದಾಖಲೆಗಳು ಸಪರ್ಮಕವಾಗಿದೆ ಎಂದು ಹೇಳಿದರು. ನನ್ನ ಸಂಪೂರ್ಣ ಆಸ್ತಿ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುತ್ತೇನೆ ಎಂದು ಹೇಳಿದರು. ಬಿಜೆಪಿ ನಾಯಕರ ಕುಮ್ಮಕ್ಕಿನಿಂದ ಟಿ.ಜೆ. ಅಬ್ರಾಹಂ ಈ ರೀತಿ ಆರೋಪಗಳನ್ನು ಮಾಡುತ್ತಿದ್ದು ಇದರ ಹಿಂದೆ ಇಬ್ಬರು ಬಿಜೆಪಿ ನಾಯಕರು ಇದ್ದಾರೆ ಎಂದು ಆರೋಪಿಸಿದರು.
You must be logged in to post a comment Login