KARNATAKA
ಅಲಂಕೃತ ವಾಹನಗಳಿಗೆ ಶಬರಿಮಲೆ ಪ್ರವೇಶಕ್ಕೆ ನಿರ್ಬಂಧ ಹೇರಿದ ಕೇರಳ ಹೈಕೋರ್ಟ್..!
ಕಾಸರಗೋಡು: ಪವಿತ್ರ ಕ್ಷೇತ್ರ ಶಬರಿಮಲೆ ಗೆ ಸುರಕ್ಷತಾ ದೃಷ್ಟಿಯಿಂದ ಅಲಂಕೃತ ವಾಹನಗಳ ಪ್ರವೇಶವನ್ನು ನಿಷೇಧಿಸಿ ಕೇರಳ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಸಾಧಾರಣವಾಗಿ ಮಂಡಲ ಹಾಗೂ ಮಕರ ಜ್ಯೋತಿಗಾಗಿ ಶಬರಿ ಮಲೆಗೆ ಬರುವ ಅಯ್ಯಪ್ಪ ಭಕ್ತರ ವಾಹನಗಳು ಹೂವಿನಿಂದ ಅಲಂಕೃತಗೊಂಡು ಬರುತ್ತವೆ. ಹೆಚ್ಚಾಗಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡುಗಳಿಂದ ಶಬರಿಮಲೆಗೆ ಅಯ್ಯಪ್ಪನ ದರ್ಶನಕ್ಕೆ ಬರುವ ವಾಹನಗಳನ್ನು ಹೂವಿನ ಅಲಂಕಾರ, ಬಾಳೆ ಗಿಡಗಳಿಂದ ಸೃಂಗಾರಿಸಲಾಗುತ್ತಿದೆ. ಇದನ್ನು ಕೇರಳ ಹೈಕೋರ್ಟ್ ನಿಷೇಧಿಸಿ ಆದೇಶ ಹೊರಡಿಸಿದೆ.
ಸರಕಾರಿ ಸೌಮ್ಯದ ಕೆಎಸ್‌ಆರ್‌ಟಿಸಿ ಸಹಿತ ಬಸ್‌ಗಳಿಗೂ ಅನ್ವಯವಾಗುಂತೆ ವಾಹನಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಸೂಚಿಸಿದೆ. ಕಾನೂನು ಉಲ್ಲಂಘಿಸುವವರಿಗೆ ದಂಡ ವಿಧಿಸಬೇಕು ಮತ್ತು ಹಿಂದಿನ ಆದೇಶದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಅಲಂಕೃತ ವಾಹನಗಳೊಂದಿಗೆ ಬರುವುದು ಭದ್ರತಾ ದೃಷ್ಟಿಯಿಂದ ಅಪಾಯವೆಂದು ನ್ಯಾಯಾಲಯ ತಿಳಿಸಿದೆ.ಸಾಮಾನ್ಯವಾಗಿ ಅಯ್ಯಪ್ಪ ಭಕ್ತರು ಇರು ಮುಡಿಕಟ್ಟದೊಂದಿಗೆ ವಾಹನಗಳನ್ನು ಅಲಂಕರಿಸುತ್ತಾರೆ. ವಾಹನಗಳನ್ನು ಹೂವು ಮತ್ತು ಎಲೆಗಳಿಂದ ಅಲಂಕರಿಸಬಾರದು ಮತ್ತು ಇದು ಮೋಟಾರು ವಾಹನ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹೈಕೋರ್ಟ್ ಸೂಚಿಸಿದೆ. ಅಲ್ಲದೆ, ಸರ್ಕಾರಿ ಬೋರ್ಡ್ ಹಾಕಿ ಬರುವ ಯಾತ್ರಿ ವಾಹನಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಸೂಚಸಿದೆ.ಕೇರಳವಲ್ಲದೇ ವಿವಿಧ ರಾಜ್ಯಗ ಳಿಂದ ಬರುವ ವಿವಿಧ ಸ್ಥಳಗಳಿಂದ ಶಬರಿಮಲೆ ಸೇವೆಗಳನ್ನು ನಿರ್ವಹಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಸಹ ಈ ರೀತಿ ಅಲಂಕರಿಸಲಾಗುತ್ತಿದ್ದು ಅದು ಸೇರಿ ಯಾವುದೇ ವಾಹನದಲ್ಲಿ ಇಂತಹ ಅಲಂಕಾರ ಇರಬಾರದು ಎಂದು ಹೈಕೋರ್ಟ್ ಕಟ್ಟುನಿಟ್ಟಾಗಿ ತಿಳಿಸಿದೆ.