LATEST NEWS
2700 ಟನ್ ಅಮೋನಿಯಂ ನೈಟ್ರೇಟ್ ಸ್ಪೋಟಕ್ಕೆ ಪುಡಿಯಾದ ಲೆಬನಾನ್ ನ ಬೇರುಟ್ ನಗರ
ಬೇರುಟ್: ಮಧ್ಯ ಪ್ರಾಚ್ಯದ ಲೆಬನಾನ್‌ನ ರಾಜಧಾನಿ ಬೇರುಟ್‌ನಲ್ಲಿ ಅಮೋನಯಂ ನೈಟ್ರೇಟ್ ನಿಂದಾಗಿ ಸಂಭವಿಸಿದ ಮಹಾಸ್ಟೋಟದಲ್ಲಿ 78 ಮಂದಿ ಸಾವನಪ್ಪಿದರೆ 4000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇನ್ನು ಈ ಮಹಾ ಸ್ಪೋಟ ಬೇರುಟ್ ನಗರವನ್ನೇ ಬೆಚ್ಚಿಬೀಳಿಸಿದೆ.
ಮಂಗಳವಾರ ಸಂಭವಿಸಿರುವ ಸ್ಫೋಟವು ಇಡೀ ಬೇರುಟ್ ನಗರವನ್ನು ಅಲುಗಿಸಿದೆ. ಕಟ್ಟಡಗಳ ಗಾಜುಗಳು ಪುಡಿಯಾಗಿವೆ, ಸ್ಫೋಟ ಆಗಿರುವ ಸಮೀಪ ಒಂದು ಮೈಲಿ ಕಟ್ಟಡಗಳು ಕುಸಿದು ಅವಶೇಷಗಳ ಅಡಿಯಲ್ಲಿ ಹಲವು ಜನ ಸಿಲುಕಿದ್ದಾರೆ.
ಇಲ್ಲಿನ ಬಂದರು ಪ್ರದೇಶದಲ್ಲಿ ಸ್ಪೋಟ ಸಂಭವಿಸಿದ್ದು ಘಟನೆಯ ವಿಡಿಯೋಗಳು ವೈರಲ್ ಆಗುತ್ತಿದ್ದು ನಿಜಕ್ಕೂ ಭಯಭೀತಗೊಳಿಸುತ್ತದೆ. ಘಟನೆಯಲ್ಲಿ ಕಟ್ಟಡಗಳ ಗಾಜುಗಳು ಪುಡಿಯಾಗಿವೆ, ಸ್ಫೋಟ ಆಗಿರುವ ಸಮೀಪ ಒಂದು ಮೈಲಿ ಕಟ್ಟಡಗಳು ಕುಸಿದು ಅವಶೇಷಗಳ ಅಡಿಯಲ್ಲಿ ಹಲವು ಜನ ಸಿಲುಕಿದ್ದಾರೆ.
ಬೇರುಟ್‌ನ ಮಹಾ ಸ್ಪೋಟಕ್ಕೆ ಬಂದರಿನಲ್ಲಿದ್ದ ಸ್ಪೋಟಕವೇ ಕಾರಣ ಎಂದು ತಿಳಿದುಬಂದಿದೆ. ಅಲ್ಲಿನ ಸೇನೆಯ ಜನರಲ್ ಸೆಕ್ಯುರಿಟಿ ಚೀಫ್ ಅಬ್ಬಾಸ್ ಇಬ್ರಾಹಿಂ ಈ ಬಗ್ಗೆ ಮಾಹಿತಿ ನೀಡಿದ್ದು, ಸುಮಾರು 2700 ಟನ್ ಅಮೋನಬಿಯಂ ನೈಟ್ರೇಟ್ ಬಂದರಿನಲ್ಲಿತ್ತು. ಅದನ್ನ ಆಫ್ರಿಕಾಗೆ ಸಾಗಿಸುವ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.
ಸ್ಪೋಟದ ತೀವ್ರತೆಗೆ ಕಾರುಗಳು ಮಗುಚಿ ಬಿದ್ದಿವೆ, ರಸ್ತೆಗಳಲ್ಲಿ ಕಟ್ಟಡಗಳ ಅವಶೇಷಗಳು ತುಂಬಿವೆ ಹಾಗೂ ಗಾಯಾಳುಗಳು ನಡೆಯುತ್ತಲೇ ಆಸ್ಪತ್ರೆಗೆ ಸೇರಬೇಕಾದ ಅನಿವಾರ್ಯತೆ ಉಂಟಾಗಿದೆ. ಕೊರೊನಾ ವೈರಸ್‌ನಿಂದಾಗಿ ಸಮಸ್ಯೆಯಲ್ಲಿರುವಾಗಲೇ ಈ ಘಟನೆ ನಡೆದಿದೆ.
https://twitter.com/PraveenBEcivil/status/1290835085004947456
Another Angle
looks like a scene from a disaster Nuclear movie #Beirut #Lebanon pic.twitter.com/Bhj8fIOeyA— Pooja Pilania (@PoojaPilania1) August 5, 2020