BELTHANGADI
ಬೆಳ್ತಂಗಡಿ ಬಳಿ ಸತ್ತು ಬಿದ್ದ ಹದ್ದುಗಳು: ಹಕ್ಕಿಜ್ವರದ ಆತಂಕ
ಬೆಳ್ತಂಗಡಿ, ಜನವರಿ 08: ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ನಿಡಿಗಲ್ ಮಜಲು ನಿವಾಸಿಗಳಾದ ಗೋಪಾಲ ಮಡಿವಾಳ ಹಾಗೂ ಶೇಖರ ಮಡಿವಾಳ ಅವರ ಗದ್ದೆಯಲ್ಲಿ ಹದ್ದುಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಎರಡು ಹದ್ದುಗಳು ಸತ್ತು ಮೂರು ದಿನ ಆಗಿರುವ ಸಾಧ್ಯತೆಯಿದ್ದು, ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇದರಿಂದ ಪರೀಕ್ಷೆಗೆ ಮಾದರಿ ಸಂಗ್ರಹಿಸಲು ಅಸಾಧ್ಯ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಆರೋಗ್ಯ ಇಲಾಖೆ ಭೇಟಿ ನೀಡಿದ್ದು, ಸುತ್ತಮುತ್ತಲ ಪರಿಸರದಲ್ಲಿ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ಪರಿಸರದ ತೆಂಗಿನ ಮರಗಳಲ್ಲಿ ಹದ್ದುಗಳು ಗೂಡು ಕಟ್ಟಿರುವುದರಿಂದ ಇದೇ ಪ್ರದೇಶದಲ್ಲಿ ಹೆಚ್ಚಾಗಿ ವಾಸಿಸುತ್ತಿವೆ. ಘಟನೆಗೆ ಹಕ್ಕಿ ಜ್ವರವೇ ಕಾರಣವೋ ಅಥವಾ ತಮ್ಮಲ್ಲೇ ಘರ್ಷಣೆಯಿಂದ ಸಾವಿಗೀಡಾಗಿವೆಯೋ ಎಂಬುದು ಸ್ಪಷ್ಟವಾಗಿಲ್ಲ. ಆದರೂ ಸಮೀಪದ ಸುಮಾರು 25 ಮನೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಮನೆ ಮಂದಿಯಲ್ಲಿ ಜ್ವರ ಲಕ್ಷಣ ಇದೆಯಾ ಎಂಬ ಕುರಿತು ಸರ್ವೇ ನಡೆಸಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Facebook Comments
You may like
-
ಕಾರ್ಕಳ – ಸ್ಕೂಟರ್ಗೆ ಬೈಕ್ ಡಿಕ್ಕಿ ಓರ್ವ ಸಾವು
-
ಕಾರು, ವ್ಯಾನ್ ಮೇಲೆ ಉರುಳಿ ಬಿದ್ದ ಕಲ್ಲು ತುಂಬಿದ್ದ ಟ್ರಕ್ – 13 ಮಂದಿ ಸಾವು
-
ಪುಟ್ ಪಾತ್ ಮೇಲೆ ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಟ್ರಕ್ – 15 ಮಂದಿ ಸಾವು
-
ಕಟ್ಟಿಗೆಯಲ್ಲಿ ಹಲ್ಲೆ ಮಾಡಿ ತಂದೆಯನ್ನೇ ಕೊಲೆ ಮಾಡಿದ ಮಗ
-
ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಕೊಳೆತ ಭ್ರೂಣದ ಅವಶೇಷ ಪತ್ತೆ..!!
-
ಗೂಗಲ್ ಮ್ಯಾಪ್ ನಂಬಿ ಗಲ್ಲಿಗೆ ನುಗ್ಗಿದ ಬಸ್ – 11 ಕೆವಿ ವಿದ್ಯುತ್ ತಂತಿ ತಗುಲಿ 11 ಮಂದಿ ಸಜೀವ ದಹನ
You must be logged in to post a comment Login