Connect with us

    LATEST NEWS

    ಕರಾವಳಿಯಲ್ಲಿ ಕೊರೊನಾ ಲಸಿಕೆ ಡ್ರೈರನ್

    ಉಡುಪಿ ಜನವರಿ 8 : ದೇಶದಲ್ಲಿ ಈಗಾಗಲೇ ಕೊರೊನಾ ಲಸಿಕೆ ವಿತರಣೆ ಪ್ರಾರಂಭವಾಗಲು ಕ್ಷಣಗಣನೆ ಆರಂಭವಾಗಿದ್ದು, ಲಸಿಕೆಯ ಪೂರ್ವಭಾವಿಯಾಗಿ ನಡೆಯುವ ಕೊರೋನಾ ವ್ಯಾಕ್ಸಿನ್ ಡ್ರೈ ರನ್ ಕರ್ನಾಟಕದಲ್ಲಿ ಆರಂಭವಾಗಿದ್ದು, ಇಂದು ಉಡುಪಿ‌ ಜಿಲ್ಲೆಯಲ್ಲಿ ಕೊರೋನಾ ವ್ಯಾಕ್ಸಿನ್ ಡ್ರೈ ರನ್ ಗೆ ಚಾಲನೆ ನೀಡಲಾಗಿದೆ.


    ಉಡುಪಿ ನಗರದ ಕೂಸಮ್ಮ ಶಂಭು ಶೆಟ್ಟಿ ಮಹಿಳಾ ಮತ್ತು‌ ಮಕ್ಕಳ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್ ಚಾಲನೆ ನೀಡಿದರು. ಇಂದು ಜಿಲ್ಲೆಯ 8 ಕೇಂದ್ರಗಳಲ್ಲಿ ಕೋವ್ಯಾಕ್ಸಿನ್ ಡ್ರೈರನ್ ನಡೆಯುತ್ತಿದೆ. ಅಣುಕು ಕೋವ್ಯಾಕ್ಸಿನ್ ಚುಚ್ಚುಮದ್ದು ಕೊಡುವ ಮೂಲಕ ಚಾಲನೆ ನೀಡಲಾಯಿತು.

    ಜಿಲ್ಲೆಯ 8 ಕೇಂದ್ರಗಳಲ್ಲಿ ಏಕಕಾಲದಲ್ಲಿ 25ಜನರಿಗೆ ಕೋವ್ಯಾಕ್ಸಿನ್ ಚುಚ್ಚುಮದ್ದು ನೀಡಾಲಿಯತು. 852 ಆರೋಗ್ಯ ಸಂಸ್ಥೆಯಲ್ಲಿ ವ್ಯಾಕ್ಸಿನ್ ಹಂಚಿಕೆ ನಡೆಯಲಿದ್ದು, ಲೋಪದೋಷ ನಡೆಯದಂತೆ ಎಚ್ಚರಿಕೆ ವಹಿಸಲು ಈ ಡ್ರೈರನ್ ಕಾರ್ಯಕ್ರಮ ನಡೆಸಲಾಗಿದೆ.


    ಈಗಾಗಲೇ ಕೊರೊನಾ ಲಸಿಕೆ ನೀಡಲು 19,562 ಫಲಾನುಭವಿಗಳನ್ನ ಗುರುತಿಸಿರುವ ಜಿಲ್ಲಾಡಳಿತ ,ವೇಟಿಂಗ್ ರೂಂ, ವ್ಯಾಕ್ಸಿನೇಶನ್ ರೂಂ ಹಾಗೂ ಅಬ್ಸರ್ ವೇಷನ್ ರೂಂ ವ್ಯವಸ್ಥೆ ಮಾಡಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತ, ಎರಡನೇ ಹಂತದಲ್ಲಿ ‌ಫ್ರಂಟ್ ಲೈನ್ ವರ್ಕರ್ಸ್ ಹಾಗೂ ಮೂರನೇ ಹಂತದಲ್ಲಿ 50ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು ಎಲೆಕ್ಷನ್ ಹಂತದ ಮಾದರಿಯಲ್ಲಿ ಲಸಿಕೆ ಹಂಚಿಕೆ ‌ನಡೆಯಲಿದೆ ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರತಿಕ್ರಿಯೆ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply