UDUPI
ಶಿರ್ವ: ಕಾಣೆಯಾಗಿದ್ದ ಯುವತಿಯ ಮೃತದೇಹ ಬಾವಿಯಲ್ಲಿ ಪತ್ತೆ

ಉಡುಪಿ ಜುಲೈ 10: ಪರಿಚಯಸ್ಥರ ಮನೆಗೆ ಹೋಗಿ ಬರುತ್ತೇನೆಂದು ಹೊರಟಿದ್ದ ಯುವತಿಯ ಶವ ಬಾವಿಯಲ್ಲಿ ಪತ್ತೆಯಾದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಉಡುಪಿಯ ಶಿರ್ವ ಗ್ರಾಮದ 18 ವರ್ಷ ಪ್ರಾಯದ ಸೌಭಾಗ್ಯ ಮೃತ ದುರ್ದೈವಿಯಾಗಿದ್ದಾಳೆ. ಈಕೆ ಎರಡು ದಿನದ ಹಿಂದೆ ಕ್ವಾಲಿಟಿ ಪೌಲ್ಟ್ರಿ ಫಾರ್ಮ್ ಎಂಬಲ್ಲಿರುವ ತಮ್ಮ ಬಾಡಿಗೆ ಮನೆಯಿಂದ ,ಭೂತಬೆಟ್ಟು ಎಂಬಲ್ಲಿರುವ ಸಬಾಸ್ಟಿನ್ ಬರ್ಬೋಜ ಎಂಬವರ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದು, ಅಲ್ಲಿಗೂ ಹೋಗದೆ ವಾಪಾಸು ಮನೆಗೂ ಬಾರದೇ ಕಾಣೆಯಾಗಿದ್ದಳು.
ಈ ಹಿನ್ನಲೆ ಶಿರ್ವ ಪೊಲೀಸ್ ಸ್ಟೇಷನ್ ನಲ್ಲಿ ಮನೆಯವರು ದೂರು ದಾಖಲಿಸಿದ್ದರು.ದೂರಿನ ಅನ್ವಯ ಪರಿಶೀಲನೆ ನಡೆಸಿದಾಗ ಕಾಣೆಯಾಗಿದ್ದ ವ್ಯಕ್ತಿಯ ಮೃತ ದೇಹ ಇಂದು ಮನೆಯ ವಠಾರದಲ್ಲಿರುವ ಬಾವಿಯಲ್ಲಿ ಪತ್ತೆಯಾಗಿದೆ, ಸಮಾಜ ಸೇವಕ ಸೂರಿ ಶೆಟ್ಟಿ ಅವರು ಮೃತ ದೇಹವನ್ನು ಬಾವಿಯಿಂದ ಹೊರ ತೆಗೆಯಲು ಸಹಕರಿಸಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
