BANTWAL
ಬಂಟ್ವಾಳ – ನಾಪತ್ತೆಯಾಗಿದ್ದ ಯುವಕನ ಮೃತದೇಹ ರೈಲ್ವೆ ಹಳಿ ಮೇಲೆ ಪತ್ತೆ
ಬಂಟ್ವಾಳ ಜುಲೈ 30: ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದ ಯುವಕನ ಛಿದ್ರಗೊಂಡಿರುವ ಮೃತದೇಹ ಬಂಟ್ವಾಳ ತಾಲೂಕಿನ ದೇವಂದಬೆಟ್ಟು ಎಂಬಲ್ಲಿ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಮೃತ ಯುವಕನನ್ನು ಕಳ್ಳಿಗೆ ಗ್ರಾಮದ ಲಕ್ಷಣ ಎಂಬವರ ಮಗ ಕಾರ್ತಿಕ್ (25) ಎಂದು ಗುರುತಿಸಲಾಗಿದ್ದು,
ನಿನ್ನೆ ಮನೆಯಿಂದ ಹೊರಟ ಕಾರ್ತಿಕ್ ರಾತ್ರಿ 11 ಗಂಟೆವರೆಗೆ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಆತನ ಹುಡುಕಾಟ ಆರಂಭಿಸಿದ್ದು, ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಕಾರ್ತಿಕ್ ನ ಮೃತದೇಹ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಬಂಟ್ವಾಳ ನಗರ ಠಾಣಾ ಪೋಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಉನ್ನತ ಮಟ್ಟದ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರೈಲ್ವೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಸಾವಿನ ಬಗ್ಗೆ ಸಂಶಯವಿರುವ ಹಿನ್ನೆಲೆಯಲ್ಲಿ ಪೋಲೀಸರ ತನಿಖೆ ಮುಂದುವರಿಸಿದ್ದಾರೆ.