LATEST NEWS
ಮಾಬುಕಳ ಬ್ರಿಡ್ಜ್ ಮೇಲೆ ಬೈಕ್ ಇಟ್ಟು ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ….!!

ಬ್ರಹ್ಮಾವರ ಅಗಸ್ಟ್ 14: ಬ್ರಹ್ಮಾವರದ ಮಾಬುಕಳ ಬ್ರಿಡ್ಜ್ ಬಳಿ ಬೈಕ್ ಇಟ್ಟು ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡವರನ್ನು ಕೊಡಂಕೂರು ನಿವಾಸಿ ಅಶೋಕ್ ಸುವರ್ಣ ಎಂದು ಗುರುತಿಸಲಾಗಿದೆ.
ಆರ್ ಟಿಓ ಎಜೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಅಶೋಕ್ ಸುವರ್ಣ ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಮಾಬುಕಳ ಬ್ರಿಡ್ಜ್ ಬಳಿ ಬೈಕ್ ಇಟ್ಟು ನಾಪತ್ತೆಯಾಗಿದ್ದರು.

ಶುಕ್ರವಾರ ಮಧ್ಯಾಹ್ನ ಬ್ರಿಡ್ಜ್ ಮೇಲೆ ಅಶೋಕ್ ಸುವರ್ಣ ಬೈಕ್ ಪತ್ತೆಯಾಗಿತ್ತು. ಇಂದು ಮುಂಜಾನೆಯಿಂದ ಆಪದ್ಭಾಂಧವ ಈಶ್ವರ್ ಮಲ್ಪೆಯಿಂದ ಹುಟುಕಾಟ ನಡೆಸಿದರು. ಮಧ್ಯಾಹ್ನ ವೇಳೆ ಮಾಬುಕಳದ ಸೀತಾನದಿಯಲ್ಲಿ ಅಶೋಕ್ ಸುವರ್ಣ ಶವ ಪತ್ತೆ
ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟಿದ್ದ ಅಶೋಕ್ ಸುವರ್ಣ, ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.