DAKSHINA KANNADA
ಕಾಡುತ್ಪತ್ತಿ ಸಂಗ್ರಹಕ್ಕೆ ತೆರಳಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕಾಡಿನಲ್ಲಿ ಪತ್ತೆ

ಪುತ್ತೂರು ಡಿಸೆಂಬರ್ 12: ಕಾಡುತ್ಪತ್ತಿ ಸಂಗ್ರಹಕ್ಕೆ ಕಾಡಿಗೆ ತೆರಳಿದ್ದ ವ್ಯಕ್ತಿ ಮೃತದೇಹ ಬಾಗೈಮಲೆ ಕಾಡಿನಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಬಿಳಿನೆಲೆ ನಿವಾಸಿ ವೆಂಕಪ್ಪ ಗೌಡ (62) ಎಂದು ಗುರುತಿಸಲಾಗಿದೆ.
ಇವರು ನೆರೆಮನೆಯ ಬಾಲಚಂದ್ರ ಎಂಬವರ ಜೊತೆಗೆ ಕಾಡುತ್ಪತ್ತಿ ಸಂಗ್ರಹಕ್ಕಾಗಿ ಕಾಡಿಗೆ ಡಿಸೆಂಬರ್ 5 ರಂದು ತೆರಳಿದ್ದರು, ಆದರೆ ಮನೆಗೆ ವಾಪಾಸ್ ಬರ ಹಿನ್ನಲೆ ಅವರ ಮಗ ಕಡಬ ಪೋಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಡಿಸೆಂಬರ್ 10 ರಂದು ವೆಂಕಪ್ಪ ಗೌಡ ಉಪಯೋಗಿಸುತ್ತಿದ್ದ ಟಾರ್ಚ್ ಲೈಟ್, ಸಿಗರ್ ಲೈಟ್,ವಾಚ್ ಹಾಗೂ ಕತ್ತಿ ಮನೆ ಬಾಗಿಲಲ್ಲಿ ಪತ್ತೆಯಾಗಿತ್ತು .

ತುಂಬಾ ದಿನಗಳಾದರೂ ಬಾರದ ಹಿನ್ನಲೆ ಅನುಮಾನಗೊಂಡ ಗ್ರಾಮಸ್ಥರು ಹಾಗೂ ಮನೆಮಂದಿ ಬಾಗೈಮಲೆ ಕಾಡಿನಲ್ಲಿ ಹುಡುಕಾಟ ನಡೆಸಿದ್ದಾರೆ. ಈ ಸಂದರ್ಭ ಬಾಗೈಮಲೆ ಕಾಡಿನಲ್ಲಿ ಮೃತದೇಹ ಪತ್ತೆಯಾಗಿದೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.