Connect with us

LATEST NEWS

ಕೊಣಾಜೆಯ ಅಸೈಗೋಳಿಯಲ್ಲಿ ಬಿಜೆಪಿ ಬೆಂಬಲಿಗನ ಮೇಲೆ ಮಾರಣಾಂತಿಕ ದಾಳಿ

ಮಂಗಳೂರು ಡಿಸೆಂಬರ್ 12: ಮಂಗಳೂರಿನಲ್ಲಿ ಗ್ರಾಮ ಪಂಚಾಯತ್ ಚುನಾವಣಾ ಕಣ ರಂಗೇರಿದೆ. ಜೊತೆಗೆ ರಾಜಕೀಯ ಸಂಘರ್ಷ ಕೂಡ ಆರಂಭವಾಗಿದೆ. ಮಂಗಳೂರು ಹೊರವಲಯದ ಕೊಣಾಜೆಯ ಅಸೈಗೋಳಿಯಲ್ಲಿ ಬಿಜೆಪಿ ಬೆಂಬಲಿಗರೊಬ್ಬರ ಮೇಲೆ ದಾಳಿ ನಡೆದಿದೆ.

ರಾಜ್ಯ ಹಜ್ ಕಮಿಟಿ ಸದಸ್ಯ ಹನೀಫ್ ನಿಜಾಮಿ ತಲೆಗೆ ವ್ಯಕ್ತಿಯೊಬ್ಬ ಸುತ್ತಿಗೆಯಿಂದ ಹೊಡೆದಿದ್ದು ಗಂಭೀರ ಗಾಯಗೊಂಡಿದ್ದ ಆತನನ್ನು ದೇರಳಕಟ್ಟೆ ಖಾಸಾಗಿ ಆಸಪತ್ರೆಗೆ ದಾಖಲು ಮಾಡಲಾಗಿದೆ. ಮಂಜನಾಡಿ ಅಸೈ ವಾರ್ಡಿನ ಬಿಜೆಪಿ ಬೆಂಬಲಿಗ ಹನೀಫ್ ನಿಜಾಮಿ ತಲೆಗೆ ಸುತ್ತಿಗೆಯಿಂದ ಬಡಿಯಲಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ನಿಜಾಮಿಯನ್ನು ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಸೈಗೋಳಿ ನಿವಾಸಿ ಕಾಂಗ್ರೆಸ್ ಕಾರ್ಯಕರ್ತರೆನ್ನಲಾದ ಕರೀಂ ಎಂಬಾತನೇ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಹನೀಫ್ ನಿಜಾಮಿ, ಕರ್ನಾಟಕ ರಾಜ್ಯ ಹಜ್ ಕಮಿಟಿ ಸದಸ್ಯ ಹಾಗೂ ಧಾರ್ಮಿಕ ಗುರುಗಳಾಗಿದ್ದಾರೆಂದು ಹೇಳಲಾಗಿದ್ದು, ಕೊಣಾಜೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Facebook Comments

comments