LATEST NEWS
ಭಾರತದ ಈ ನಾಲ್ಕು ಲ್ಯಾಬ್ ಗಳ ಕೊರೊನಾ ಸರ್ಟಿಫಿಕೇಟ್ ಇದ್ದರೆ ದುಬೈ ಪ್ರಯಾಣಕ್ಕೆ ಅವಕಾಶ ಇಲ್ಲ…!!
ನವದೆಹಲಿ: ದೇಶದಲ್ಲಿ ಕೊರೊನಾ ವರದಿಯಲ್ಲೂ ಗೋಲ್ ಮಾಲ್ ನಡೆಯುತ್ತಿದ್ದು, ಇದಕ್ಕೆ ಈಗ ಸ್ಪಷ್ಟ ಉದಾಹರಣೆ ದೊರೆತಿದ್ದು, ನಾಲ್ಕು ಭಾರತೀಯ ಪ್ರಯೋಗಾಲಯಗಳಿಂದ ಪ್ರಯಾಣಿಕರ ಪಡೆದ ಕೋವಿಡ್-19 ನೆಗಟಿವ್ ಪರೀಕ್ಷಾ ವರದಿಗಳನ್ನು ತಿರಸ್ಕರಿಸಬೇಕು ಎಂದು ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರ(ಡಿಸಿಎಎ) ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗೆ ಸೂಚಿಸಿದೆ. ಇದರೊಂದಿಗೆ ಕೊರೊನಾ ವರದಿಗಳು ಕೂಡ ಈಗ ನಕಲಿಯಾಗಿ ದೊರೆಯಲಿಕ್ಕೆ ಪ್ರಾರಂಭವಾದಂತಾಗಿದೆ.
ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರದ ಪ್ರಕಾರ ಜೈಪುರದ ಸೂರ್ಯ ಲ್ಯಾಬ್, ಕೇರಳದ ಮೈಕ್ರೋಹೆಲ್ತ್ ಲ್ಯಾಬ್, ಡಾ.ಪಿ.ಭಾಸಿನ್ ಪಾಥ್‌ಲ್ಯಾಬ್ಸ್(ಖಾಸಗಿ) ಲಿಮಿಟೆಡ್ ಮತ್ತು ದೆಹಲಿಯ ನೋಬಲ್ ಡಯಾಗ್ನೋಸ್ಟಿಕ್ ಸೆಂಟರ್ ನೀಡುವ ಕೋವಿಡ್-19 ವರದಿಗಳನ್ನು ತಿರಸ್ಕರಿಸಬೇಕು ಎಂದು ವಿಮಾನಯಾನ ಸಂಸ್ಥೆ ಟ್ವಿಟರ್‌ನಲ್ಲಿ ತಿಳಿಸಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯ ನಿಯಮಗಳ ಪ್ರಕಾರ, ಭಾರತದಿಂದ ಪ್ರಯಾಣಿಸುವ ಪ್ರಯಾಣಿಕರು ಪ್ರಯಾಣಕ್ಕೂ 96 ಗಂಟೆಗಳ ಮೊದಲು ಮಾಡಿದ ಆರ್ ಟಿ-ಪಿಸಿಆರ್ ನಿಂದ ಪಡೆದ ಕೋವಿಡ್ ನೆಗಟಿವ್ ಮೂಲ ಪ್ರಮಾಣಪತ್ರಗಳನ್ನು ಸಲ್ಲಿಸಬೇಕು.
ಆಗಸ್ಟ್ 18 ಮತ್ತು ಸೆಪ್ಟೆಂಬರ್ 4 ರಂದು ಕೋವಿಡ್-19 ಪಾಸಿಟಿವ್ ಪ್ರಮಾಣಪತ್ರಗಳೊಂದಿಗೆ ಇಬ್ಬರು ಪ್ರಯಾಣಿಕರನ್ನು ಕರೆತಂದಿದ್ದಕ್ಕಾಗಿ ಸೆಪ್ಟೆಂಬರ್ 18 ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳನ್ನು ಡಿಸಿಎಎ 24 ಗಂಟೆಗಳ ಕಾಲ ಸ್ಥಗಿತಗೊಳಿಸಿತು.