Connect with us

LATEST NEWS

ಧ್ಯೆಯೋಕ್ತಿ (Slogan) ಅಥವಾ ಜಾಹೀರಾತು ಪ್ರದರ್ಶನ ಮಾಡಿದರೆ- ಪ್ರಕರಣ ದಾಖಲು

ಧ್ಯೆಯೋಕ್ತಿ (Slogan) ಅಥವಾ ಜಾಹೀರಾತು ಪ್ರದರ್ಶನ ಮಾಡಿದರೆ- ಪ್ರಕರಣ ದಾಖಲು

ಮಂಗಳೂರು ಏಪ್ರಿಲ್ 04 : ಖಾಸಗಿ ಮತ್ತು ಇತರ ವಾಹನಗಳಲ್ಲಿ ವ್ಯಾಪಾರ ಮತ್ತು ವ್ಯಕ್ತಿಗಳ, ಪಕ್ಷಗಳ ಜಾಹೀರಾತು ಮತ್ತು /ಅಥವಾ ಧ್ಯೆಯೋಕ್ತಿ (Slogan) ಗಳನ್ನು ವಾಹನದ ಹಿಂಭಾಗ ಮತ್ತು ಮುಂಭಾಗದ windscreen ಗಾಜಿನ ಮೇಲೆ ಪ್ರದರ್ಶನ ಮಾಡಿ ಓಡಾಡುತ್ತಿರುವುದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು, ದಕ್ಷಿಣ ಕನ್ನಡ, ಮಂಗಳೂರು ಇವರ ಗಮನಕ್ಕೆ ಬಂದಿರುತ್ತದೆ.

ಸೂಕ್ತ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಈ ರೀತಿಯಾಗಿ ವ್ಯಾಪಾರ ಮತ್ತು ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಹ ಯಾವುದೇ ಜಾಹೀರಾತು ಅಥವಾ ಧ್ಯೆಯೋಕ್ತಿಗಳನ್ನು ಪ್ರದರ್ಶಿಸುವುದು ಮಾನ್ಯ ಉಚ್ಛ ನ್ಯಾಯಾಲಯದ ಪ್ರಕರಣ ಸಂಖ್ಯೆ: 57990/2017, ಅ/W 8301/2007, 5703/2018 ಹಾಗೂ ಮಾನ್ಯ ಸರ್ವೋಚ್ಛ ನ್ಯಾಯಾಲಯದ W/P Civil No.265/2011 (Avishek Goenka v/s Union of India and another) ಇವುಗಳ ಅನ್ವಯ ಕೇಂದ್ರ ಮೋಟಾರು ವಾಹನ ನಿಯಮಾವಳಿ 1989ರ ನಿಯಮ 100 ರಲ್ಲಿ ತಿಳಿಸಿರುವಂತೆ ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆಯಾಗಿರುತ್ತದೆ.

ಆದ್ದರಿಂದ, ಎಲ್ಲಾ ವಾಹನ ಮಾಲೀಕರು ಯಾವುದೇ ಧ್ಯೆಯೋಕ್ತಿ (Slogan) ಆಗಲಿ ಅಥವಾ ಜಾಹೀರಾತು ಆಗಲಿ ತಮ್ಮ ವಾಹನದ ಮೇಲೆ ಪ್ರದರ್ಶಿಸದಂತೆ ಈ ಮೂಲಕ ತಿಳಿಸಲಾಗಿದೆ.

ಚುನಾವಣಾ ಸಮಯದಲ್ಲಿ ಈ ರೀತಿಯ ಉಲ್ಲಂಘನೆಗಳು ಕಂಡುಬಂದಲ್ಲಿ ಯಾವುದೇ ಮರುನೋಟೀಸ್ ನೀಡದೆ ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ಅಧ್ಯಾಯ 7 ರ ಉಲ್ಲಂಘನೆಯಾಗಿರುವುದರಿಂದ ವಾಹನವನ್ನು ಮುಟ್ಟುಗೋಲು ಹಾಕಿ ಕಾನೂನು ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು, ದಕ್ಷಿಣ ಕನ್ನಡ, ಮಂಗಳೂರು ಇವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *