ಆಳಸಮುದ್ರದ ಮೀನುಗಾರಿಕೆ ಸಂದರ್ಭ ಬೋಟ್ ನಲ್ಲಿ ಆಯತಪ್ಪಿ ಬಿದ್ದು ಕಾರ್ಮಿಕನೋರ್ವನ ಸಾವು

ಮಂಗಳೂರು ಎಪ್ರಿಲ್ 4: ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಸಂದರ್ಭ ಮೀನುಗಾರಿಕಾ ಬೋಟ್ ನಲ್ಲಿ ಆಯತಪ್ಪಿ ಬಿದ್ದು ಕಾರ್ಮಿಕನೋರ್ವ ಮೃತಪಟ್ಟ ಘಟನೆ ನಡೆದಿದೆ.

ಮೃತ ವ್ಯಕ್ತಿಯನ್ನು ತಮಿಳುನಾಡು ಮೂಲಕ ಸೇನನ್ ಎಂದು ಗುರುತಿಸಲಾಗಿದೆ. ಮುಬುಡು ಹೆಸರಿನ ಮೀನುಗಾರಿಕಾ ಬೋಟ್ ನಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸಂದರ್ಭ ಮೀನು ಶೇಖರಣೆ ಮಾಡುವ ಡಕ್ಟ್ ನ ಒಳಗೆ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ.

Facebook Comments

comments