ಚಿತ್ರನಟರೇನು ಬೇರೆ ಗ್ರಹದಿಂದ ಬಂದವರಲ್ಲ – ನಟಿ ತಾರಾ

ಮಂಗಳೂರು ಎಪ್ರಿಲ್ 4: ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಚಿತ್ರನಟರ ಪ್ರಚಾರಕ್ಕೆ ಮತ ಬರಲ್ಲ ಎಂದು ಹೇಳಿಕೆಗೆ ಚಿತ್ರನಟರೇನು ಬೇರೆ ಗ್ರಹದಿಂದ ಬಂದವರಲ್ಲ ಎಂದು ಚಿತ್ರ ನಟಿ ತಾರಾ ತಿರುಗೇಟು ನೀಡಿದ್ದಾರೆ.

ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಮತಪ್ರಚಾರಕ್ಕೆ ಆಗಮಿಸಿದ ಸಂದರ್ಭ ಮಾತನಾಡಿದ ಅವರು ಚಿತ್ರ ಕಲಾವಿದರೂ ಇದೇ ಸಮಾಜದಿಂದ ಬೆಳೆದು ಬಂದವರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕೂಡ ಚಿತ್ರರಂಗದಿಂದಲೇ ಬಂದವರು, ಕುಮಾರಸ್ವಾಮಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದೂ ಚಿತ್ರರಂಗದಿಂದಲೇ ಅಲ್ಲದೇ ಕುಮಾರಸ್ವಾಮಿಯವರ ಪ್ರೊಡಕ್ಷನ್ ಹೌಸ್ ನಲ್ಲಿ ನಾನೂ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ಸಿನಿಮಾ ತಾರೆಯರು ಬರೋದ್ರಿಂದ ಗೆಲ್ಲುವ ವಿಚಾರ ವ್ಯಕ್ತಿಗತವಾಗಿದ್ದು, ಸಿನಿಮಾದವರು ಗೆದ್ದು ಸಿಎಂ ಆಗಿದ್ದಾರೆ, ಅಮೆರಿಕದಲ್ಲಿ ಅಧ್ಯಕ್ಷರಾಗಿದ್ದಾರೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.