KARNATAKA
ಅಪಾಯ ಅಹ್ವಾನಿಸುತ್ತಿದ್ದ ಲೇಡಿಹಿಲ್ ದಸರಾ ಫ್ಲೆಕ್ಸ್ ಧಾರಾಶಾಹಿ- ಕೂದಲೆಳೆಯ ಅಂತರದಲ್ಲಿ ಪಾರಾದ ಮಹಿಳೆ,ವಾಹನ..!

ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಸುರಿದ ಗಾಳಿ ಮಳೆಗೆ ಈ ಅಪಾಯಕ್ಕೆ ಅಹ್ವಾನ ನೀಡುತ್ತಿದ್ದ ಬೃಹತ್ ಫ್ಲೆಕ್ಸ್ ನೆಲಕ್ಕೆ ಉರುಳಿ ಬಿದ್ದಿದ್ದು ಈ ಸಂದರ್ಭ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಮತ್ತು ವಾಹನಗಳು ಕೂದಲೆಳೆಯ ಅಂತರದಲ್ಲಿ ಪವಾಡ ಸದೃಶ್ಯವಾಗಿ ಪಾರಾಗಿದ್ದಾರೆ.
ಮಂಗಳೂರು : ಮಂಗಳೂರು ದಸರಾಕ್ಕೆ ಶುಭಾಷಯ ಕೋರಿ ನಗರದ ಲೇಡಿ ಹಿಲ್ ಬಳಿ ಹಾಕಲಾಗಿದ್ದ ಬೃಹತ್ ಫ್ಲೆಕ್ಸ್ ಧಾರಶಾಹಿ ಆಗಿದೆ.

ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಸುರಿದ ಗಾಳಿ ಮಳೆಗೆ ಈ ಅಪಾಯಕ್ಕೆ ಅಹ್ವಾನ ನೀಡುತ್ತಿದ್ದ ಬೃಹತ್ ಫ್ಲೆಕ್ಸ್ ನೆಲಕ್ಕೆ ಉರುಳಿ ಬಿದ್ದಿದ್ದು ಈ ಸಂದರ್ಭ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಮತ್ತು ವಾಹನಗಳು ಕೂದಲೆಳೆಯ ಅಂತರದಲ್ಲಿ ಪವಾಡ ಸದೃಶ್ಯವಾಗಿ ಪಾರಾಗಿದ್ದಾರೆ.
ರಸ್ತೆ ಮುಖವಾಗಿ ಬಿದ್ದಿದ್ದರಿಂದ ಭಾರಿ ಅಪಾಯ ತಪ್ಪಿದ್ದು ಒಂದು ವೇಳೆ ಹಿಮ್ಮುಖವಾಗಿ ಬಿದ್ದಿದ್ದರೆ ವಿದ್ಯುತ್ ತಂತಿಗಳಿಗೆ ತಾಗಿ ಭಾರಿ ಅನಾಹುತಾ ಸೃಷ್ಟಿಯಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ನೆಲಕ್ಕುರುಳಿದ ಫ್ಲೆಕ್ಸನ್ನು ಸ್ಥಳಿಯರು ಹಾಗು ಮುಂಭಾಗದ ಪೆಟ್ರೋಲ್ ಪಂಪ್ ನ ಸಿಬ್ಬಂದಿಗಳ ಸಹಕಾರದಿಂದ ತೆರವು ಮಾಡಲಾಯಿತು.
ಈ ಅಪಾಯಕಾರಿ ಫ್ಲೆಕ್ಸ್ ಬಗ್ಗೆ ಕೆಲ ದಿನಗಳ ಹಿಂದೆ ಮಂಗಳೂರು ಮಿರಾರ್ ಸಹಿತ ಅನೇಕ ಮಾದ್ಯಮಾಗಳು ವರದಿ ಬಿತ್ತರಿಸಿ ಎಚ್ಚರಿಸಿದ್ದುವು,
ಪಾಲಿಕೆ, ಮೆಸ್ಕಾಂ ಅಧಿಕಾರಿಗಳಿಗೂ ಈ ಬಗ್ಗೆ ಮಾಹಿತಿ ನೀಡಿದ್ದುವು ಆದ್ರೆ ಬೇಜಾಬ್ದಾರಿಯಿಂದ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ.
ಮಾಧ್ಯಮ ದಲ್ಲಿ ಪ್ರಸಾರ ಆಗಿರೊದು ಅಲ್ಲದೆ ಅಧಿಕಾರಿಗಳ ಗಮನಕ್ಕೆ ತಂದರೂ ತಲೆಕೆಡಿಸದೇ ಇದ್ದುದರಿಂದ ಇಂತಹ ಅನಾಹುತಕ್ಕೆ ಆಸ್ಪದ ನೀಡಿದಂತೆ ಆಯಿತು.
ಇದೀಗ ತಾನಾಗಿಯೇ ಫ್ಲೆಕ್ಸ್ ಧಾರಾಶಾಹಿ ಆಗಿದ್ದು. ನಗರದಲ್ಲಿ ಎತ್ತರವಾಗಿ ಹಾಕಿರುವ ಯಮಧೂತನಂತೆ ಬಾಯಿ ತೆರೆದು ನಿಂತಿರುವ ಆನೇಕ ಫ್ಲೆಕ್ಸ್‌ಗಳ ಬಗ್ಗೆ ಇದೀಗ ಸಂದೇಹಗಳು ಮೂಡಿದ್ದು, ಅಮಾಯಕರ ಜೀವಹಾನಿ ಆಗುವ ಮುಂಚೆ ಸಂಬಂಧಪಟ್ಟ ಅಧಿಕಾರಿಗಳು , ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತು ಕ್ರಮ ಕೈಗೊಂಡರೆ ಒಳಿತು.