Connect with us

LATEST NEWS

ಕದನ ವಿರಾಮಕ್ಕೆ ಕೊನೆಗೂ ಒಪ್ಪಿಕೊಂಡ ಇಸ್ರೇಲ್ ಮತ್ತು ಇರಾನ್

ಇಸ್ರೇಲ್ ಜೂನ್ 24: 12 ದಿನಗಳಲ್ಲಿ ನಡೆದ ಯುದ್ದ ಬಳಿಕ ಕೊನೆಗೂ ಇಸ್ರೇಲ್ ಮತ್ತು ಇರಾನ್ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ. ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮ ಪ್ರಸ್ತಾಪಿಸಿದ್ದರೂ, ಇರಾನ್ ಮಾತ್ರ ಅದನ್ನು ನಿರಾಕರಿಸಿತ್ತು, ಆದರೆ ಇದೀಗ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಗೆ ನೀಡಿವೆ. ಇದರೊಂದಿಗೆ 12 ದಿನಗಳಿಂದ ನಡೆಯುತ್ತಿದ್ದ ಯುದ್ದ ಅಂತ್ಯಗೊಂಡಿದೆ ಎಂದು ಹೇಳಲಾಗಿದೆ.


ಅಮೇರಿಕಾದ ಇರಾನ್ ನ ಪರಮಾಣು ಕೇಂದ್ರಗಳ ಮೇಲೆ ದಾಳಿಗೆ ಪ್ರತೀಕಾರವಾಗಿ, ಕತಾರ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಸೋಮವಾರ ಇರಾನ್ ಕ್ಷಿಪಣಿ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಉಭಯ ರಾಷ್ಟ್ರಗಳ ನಡುವೆ ಕದನ ವಿರಾಮ ಏರ್ಪಟ್ಟಿದೆ ಎಂದು ಟ್ರಂಪ್ ಘೋಷಿಸಿದ್ದರು.


ಇದರ ಬಳಿಕ ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡು ಇರಾನ್ ನಡೆಸಿದ ಕೊನೆಯ ಕ್ಷಿಪಣಿ ದಾಳಿಯಲ್ಲಿ 4 ಮಂದಿ ಸಾವಿಗೀಡಾಗಿದ್ದರು. ಇಸ್ರೇಲ್ ಕೂಡ ಬೆಳಗಿನ ಜಾವ ಇರಾನ್ ಮೇಲೆ ದಾಳಿ ನಡೆಸಿತು. ಈ ಬಳಿಕ ಎರಡೂ ರಾಷ್ಟ್ರಗಳು ಕದನ ವಿರಾಮವನ್ನು ಒಪ್ಪಿಕೊಂಡವು.  ಟ್ರಂಪ್‌ ಅವರ ಸಮನ್ವಯದೊಂದಿಗೆ ಇಸ್ರೇಲ್ ಇರಾನ್‌ನೊಂದಿಗೆ ದ್ವಿಪಕ್ಷೀಯ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

Share Information
Continue Reading
Advertisement
1 Comment

1 Comment

    Leave a Reply

    Your email address will not be published. Required fields are marked *