LATEST NEWS
ದಂಗಲ್ ನಟಿ ಜೈರಾ ವಾಸಿಂಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ

ದಂಗಲ್ ನಟಿ ಜೈರಾ ವಾಸಿಂಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ
ಮುಂಬೈ, ಡಿಸೆಂಬರ್ 11 : ಬಾಲಿವುಡ್‌ನ ಸೂಪರ್ ಹಿಟ್ ಸಿನೆಮಾ “ದಂಗಲ್’ ನಲ್ಲಿ ನಟಿಸಿರುವ ಖ್ಯಾತ ತಾರೆ ಜೈರಾ ವಾಸಿಂ ಅವರು ದೆಹಲಿಯಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆ.
ಶನಿವಾರ ಈ ಘಟನೆ ಸಂಭವಿಸಿದ್ದು, 17 ವರ್ಷದ ಜೈರಾ ವಾಸಿಂ ಶನಿವಾರ ರಾತ್ರಿ ದೆಹಲಿಯಿಂದ ಮುಂಬೈ ಗೆ ಪ್ರಯಾಣಿಸುತ್ತಿದ್ದರು.

ಈ ಸಂದರ್ಭದಲ್ಲಿ ಅವರು ತನ್ನ ಹಿಂಬದಿಯ ಅಸನದಲ್ಲಿ ಕೂತ ವ್ಯಕ್ತಿ ಜೈರಾ ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.
ಈ ಬಗ್ಗೆ ಸ್ವತ: ಜೈರಾ ಅವರೇ ಪೋಲಿಸರಿ ದೂರು ನೀಡಿದ್ದಾಳೆ.
“ತಮ್ಮ ಹಿಂದಿನ ಆಸನದಲ್ಲಿ ಕುಳಿತಿದ್ದ ಪ್ರಯಾಣಿಕನೊಬ್ಬ ತಮ್ಮ ಆಸನದ ಆರ್ಮ್ ರೆಸ್ಟ್ ಮೇಲೆ ತನ್ನ ಪಾದವಿರಿಸಿ ಕುಳಿತಿದ್ದ.
ಇದನ್ನು ಹೇಗೋ ಸಹಿಸಿಕೊಂಡರೂ ಆನಂತರ ವಿಮಾನದಲ್ಲಿ ಬೆಳಕು ಮಾಯವಾದ ಮೇಲೆ, ಪಾದದ ಮುಂಭಾಗದಿಂದ ನನ್ನ ಭುಜ, ಕುತ್ತಿಗೆ, ಬೆನ್ನು ಸವರಲಾರಂಭಿಸಿದ.
ಮಂದ ಬೆಳಕಿನಿಂದಾಗಿ ಆತನ ಕಿರುಕುಳವನ್ನು ಮೊಬೈಲಿನಲ್ಲಿ ದಾಖಲಿಸಲಾಗಲಿಲ್ಲ.
ಆದರೆ ಈ ಬಗ್ಗೆ ವಿಮಾನದ ಸಿಬಂದಿಗಳಿಗೆ ದೂರಿದರೂ ಕ್ರಮ ಕೈಗೊಳ್ಳಲಿಲ್ಲ ಎಂದು ಜೈರಾ ದೂರಿದ್ದಾರೆ.
ವಿಮಾಣದಲ್ಲಿ ತನಗಾದ ಲೈಂಗಿಕ ಕಿರುಕುಳದ ಬಗ್ಗೆ ಜೈರಾ , ಇನ್‌ಸ್ಟಾಗ್ರಾಂನಲ್ಲಿ, ಲೈವ್ ವಿಡಿಯೋ ಮೂಲಕ ಈ ವಿಚಾರ ತಿಳಿಸಿದ್ದಾರೆ.
ಜೈರಾಳ ದೂರಿನ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಮಹಿಳಾ ಆಯೋಗವು ನಾಗರಿಕ ವಿಮಾನಯಾನ ನಿರ್ದೇಶನಾಲಯದ ಮೂಲಕ ಪ್ರಕರಣದ ತನಿಖೆ ಮಾಡಿಸುವುದಾಗಿ ಹೇಳಿದೆ.
ರಾಷ್ಟ್ರೀಯ ಮಹಿಳಾ ಆಯೋಗ ವಿಮಾನ ಸಂಸ್ಥೆ “ವಿಸ್ತಾರ’ಕ್ಕೆ ಹಾಗೂ ಮಹಾರಾಷ್ಟ್ರ ಡಿಜಿಪಿಗೆ ಪತ್ರ ಬರೆದು ಪ್ರಕರಣ ತನಿಖೆ ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದೆ. ಈ ಬಗ್ಗೆ ಪ್ರತಿಕ್ರೀಯಿಸಿರುವ ಕೇಂದ್ರ ವಿಮಾನಯಾಣ ಸಚಿವರು ಜೈರಾ ಅವರ ಆರೋಪ ಸಾಬೀತಾದರೆ ಆರೋಪಿ ಸಹ ಪ್ರಯಾಣಿಕನಿಗೆ ವಿಮಾನ ಪ್ರಯಾಣಕ್ಕೆ ಶಾಶ್ವತವಾಗಿ ನಿಷೇಧ ಹೇರಲಾಗುವುದು ಎಂದಿದ್ದಾರೆ.
ಮೂಲತಾ ಕಾಶ್ಮೀರದ ಜೈರಾ ವಾಸಿಂ ಅವರು ಅಮೀರ್ ಖಾನಗ ಅವರ ದಂಗಲ್ ಸಿನೆಮಾದಲ್ಲಿನ ನಟನೆಯ ಮೂಲಕ ಖ್ಯಾತಿ ಪಡೆದಿದ್ದಳು.
ಇತ್ತೀಚೆಗೆ ಬಿಡುಗಡೆಯಾಗಿರುವ ಸೀಕ್ರಟ್ ಸೂಪರ್ ಸ್ಟಾರ್ ಚಿತ್ರದಲ್ಲೂ ಜೈರಾ ಅವರು ನಟಿಸಿದ್ದಾರೆ.
ಜೈರಾ ಅವರ ಕಿರುಕುಳ ಬಗ್ಗೆ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲ ಖಂಡಿಸಿದ್ದು, ತನಿಖೆ ನಡೆಸಿ ಅರೋಪಿಯ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.