LATEST NEWS
ದಲಿತ ಸಮುದಾಯಕ್ಕೆ ಸೇರಿದ 11 ಮಂದಿ ಬೌದ್ಧ ಧರ್ಮಕ್ಕೆ ಮತಾಂತರ

ದಲಿತ ಸಮುದಾಯಕ್ಕೆ ಸೇರಿದ 11 ಮಂದಿ ಬೌದ್ಧ ಧರ್ಮಕ್ಕೆ ಮತಾಂತರ
ಪುತ್ತೂರು ಮಾರ್ಚ್ 15: ದಲಿತ ಸಮುದಾಯಕ್ಕೆ ಸೇರಿದ 11 ಮಂದಿ ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಘಟನೆ ಆಲಂಕಾರಿನಲ್ಲಿ ನಡೆದಿದೆ.
ಕಡಬ ತಾಲೂಕಿನ ಆಲಂಕಾರು ತೋಟಂತಿಲ ಎಂಬಲ್ಲಿ ಪುಟ್ಟಣ್ಣ ಎಂಬವರು ತಮ್ಮ ನೂತನವಾಗಿ ನಿರ್ಮಿಸಿದ ‘ಮೈತ್ರಿ ವಿಹಾರ’ ಗೃಹ ಪ್ರವೇಶದ ಸಂದರ್ಭದಲ್ಲಿ ಹಿಂದೂ ಧರ್ಮದಿಂದ ಬೌಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಬೌದ್ಧ ಮಹಾಸಭಾದ ಭಂತೇಜಿ ಮೈಸೂರು, ಕೊಳ್ಳೇಗಾಲದ ಜೇತವನ ಬುದ್ಧ ವಿಹಾರದ ಸುಗತಪಾಲ ಭಂತೇಜಿಯವರು ಬುದ್ಧ ಶಾಸನದ ಪ್ರಕಾರ ಬುದ್ಧ ಪೂಜೆ ನೆರವೇರಿಸಿ ಧಮ್ಮೋಪದೇಶ ನೀಡಿದರು.
ಈ ಸಂದರ್ಭದಲ್ಲಿ ಪುಟ್ಟಣ್ಣ ಅವರ ಪತ್ನಿ ಹಾಗೂ ಅವರ ಮಗಳು ಕೂಡ ಬೌಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.